ವಾಷಿಂಗ್ಟನ್/ನವದೆಹಲಿ: ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದ ಭಾರ ತದ ಅಭಿವೃದ್ಧಿ ನಿರೀಕ್ಷೆಯನ್ನು ಐಎಂಎಫ್(ಅಂತಾರಾಷ್ಟ್ರೀಯ ಹಣಕಾಸು ನಿಧಿ) ಕಡಿಮೆ ಮಾಡಿದೆ. ಕಳೆದ ಏಪ್ರಿಲ್ ಮತ್ತು ಜುಲೈ ತ್ತೈಮಾಸಿಕಕ್ಕೆ ಹೋಲಿಸಿದರೆ 2017ರಲ್ಲಿ ಶೇ.0.5ರಷ್ಟು ಇಳಿಕೆ ಮಾಡಿ ಶೇ. 6.7 ಅಭಿವೃದ್ಧಿ ದರ ನಿರೀಕ್ಷಿಸಿದೆ. ಅಲ್ಲದೆ 2018ರಲ್ಲಿ ಶೇ.7.4ಕ್ಕೆ ಇಳಿಕೆ ಮಾಡಿದೆ. ಭಾರತದ ಬೆಳವಣಿಗೆ ದರವು 2016ರಲ್ಲಿ ಶೇ. 7.1ರಷ್ಟಿತ್ತು. ಏಪ್ರಿಲ್ ವರದಿಯಲ್ಲಿ ಇದು ಶೇ. 0.3 ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಭಾರತದಲ್ಲಿ ಅಭಿವೃದ್ಧಿಯ ಗತಿ ಕುಂಠಿತಗೊಂಡಿದೆ. ಇದಕ್ಕೆ ಕಾರಣ ನೋಟು ಅಮಾನ್ಯ ಮತ್ತು ವರ್ಷದ ಮಧ್ಯ ಅವಧಿಯಲ್ಲಿ ಜಿಎಸ್‌ಟಿ ಜಾರಿಗೆ ತಂದಿರುವುದಾಗಿದೆ ಎಂದು ಐಎಂಎಫ್ ಹೇಳಿದೆ. 2016ರಲ್ಲಿ ಸರ್ಕಾರದ ಸುಸ್ಥಿರ ವೆಚ್ಚ ನಿರ್ವಹಣೆ ಮತ್ತು ದತ್ತಾಂಶ ಮೂಲದ ಬದಲಾವಣೆಯಿಂದ ಅಭಿವೃದ್ಧಿ ದರ ಉತ್ತಮವಾಗಿತ್ತು. ಇನ್ನೊಂದೆಡೆ 2017ರ ಆರ್ಥಿಕ ಬೆಳವಣಿಗೆ ದರದಲ್ಲಿ ಭಾರತಕ್ಕಿಂತ ಚೀನಾ ಪ್ರಗತಿ ಸಾಧಿಸಿದ್ದು, ಶೇ. 0.1ರಷ್ಟು ಬೆಳವಣಿಗೆ ಕಂಡು ಶೇ.6.8ಕ್ಕೆ ಏರಿಕೆಯಾಗಲಿದೆ ಎಂದು ಐಎಂಎಫ್ ನಿರೀಕ್ಷಿಸಿದೆ.
ಇನ್ನೊಂದೆಡೆ, ಕಠಿಣ ಸುಧಾರಣಾ ಕ್ರಮಗಳಾದ ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದಾಗಿ ದೇಶದಲ್ಲಿ ಮಹತ್ವದ ಬದಲಾವಣೆ ಆಗುತ್ತಿದ್ದು, ದೇಶ ಸುಸ್ಥಿರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಒಪೆಕ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬರ್ಕಿಂಡೋ ಹೇಳಿದ್ದಾರೆ.
ಜಿಎಸ್‌ಟಿ ಬಗ್ಗೆ ದಿಕ್ಕುತ್ತಪಿಸುತ್ತಿರುವ ವಿಪಕ್ಷಗಳು: ಜಿಎಸ್‌ಟಿಯನ್ನು ಅತ್ಯಂತ ಸುಸೂತ್ರವಾಗಿ ಜಾರಿ ಮಾಡಲಾಗಿದೆ. ಆದರೆ ಸೂಕ್ತ ಮಾಹಿತಿ ಪಡೆಯದ ವಿಪಕ್ಷ ಗಳು ಇದನ್ನು ವಿಫಲಗೊಳಿಸಲು ಪ್ರಯತ್ನಿ ಸುತ್ತಿವೆ ಎಂದು ವಿತ್ತ ಸಚಿವ ಅರುಣ್ ಜೇಟಿÉ ಆರೋಪಿಸಿದ್ದಾರೆ. ತೆರಿಗೆ ಪಾವತಿ ಮಾಡದಿದ್ದವರನ್ನೂ ಪಾವತಿ ಮಾಡುವಂತೆ ಪ್ರೋತ್ಸಾಹಿಸಲು ಸಾಕಷ್ಟು ಆಕರ್ಷಕ ಯೋಜನೆ ಗ ಳನ್ನು ಜಿಎಸ್‌ಟಿ ಅಡಿ ಜಾರಿ ಗೊಳಿ ಸಲಾಗಿದೆ. ಆದರೆ ಜಿಎಸ್‌ಟಿಯನ್ನು ವಿಫಲಗೊಳಿಸಲು ವಿಪಕ್ಷಗಳು ಹಲವು ಪ್ರಯತ್ನಗಳನ್ನು ಮಾಡಿವೆ. ಆದರೆ ವಿರೋಧ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳ ಸರ್ಕಾರಗಳೇ ಇವರ ಮಾತು ಕೇಳುತ್ತಿಲ್ಲ. ಯಾಕೆಂದರೆ ಜಿಎಸ್‌ಟಿಯಿಂದ ಶೇ. 80ರಷ್ಟು ತೆರಿಗೆ ಹಣ ರಾಜ್ಯಗಳಿಗೆ ಬರುತ್ತದೆ ಎಂದು ಜೇಟಿÉ ಹೇಳಿದ್ದಾರೆ. ಅತ್ಯಂತ ಕಡಿಮೆ ತೆರಿಗೆ ಶೇ.5ರಷ್ಟಿದ್ದು, ವಿಶ್ವದ ಯಾವುದೇ ದೇಶದಲ್ಲೂÉ ಇಷ್ಟು ಕಡಿಮೆ ತೆರಿಗೆ ಇಲ್ಲ. ತೆರಿಗೆ ವ್ಯಾಪ್ತಿಗೆ ಒಳಪಡದ ಜನರ ಸಂಖ್ಯೆ ಹೆಚ್ಚಿರುವುದರಿಂದಲೇ ನಾವು ಇಷ್ಟು ಕಡಿಮೆ ತೆರಿಗೆ ವಿಧಿಸಿದ್ದೇವೆ ಎಂದಿದ್ದಾರೆ.