ವಿಜ್ಞಾನ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಈಗ ಅವಕಾಶಗಳು ಜಾಸ್ತಿ ಇವೆ. ಈ ಕ್ಷೇತ್ರದ ವ್ಯಾಪ್ತಿ ಅಗಾಧವಾಗಿರುವುದೇ ಇದಕ್ಕೆ ಕಾರಣ. ಒಂದು ಕ್ಷೇತ್ರದಲ್ಲಿ ಪರಿಣತಿ ಹೊಂದಿದವರು ಇನ್ನೊಂದು ಕ್ಷೇತ್ರದಲ್ಲಿ ಅಷ್ಟೇ ಮಟ್ಟಿನ ಪರಿಣತಿ ಪಡೆಯುವ ಮತ್ತು ಸಂಶೋಧಾನಾತ್ಮಕವಾಗಿ ತೊಡಗಿಸಿಕೊಳ್ಳುವ ಅವಕಾಶಗಳು ಈಗ ಹೆಚ್ಚಿವೆ.
Advertisement
. ಇಂದಿನ ವಿದ್ಯಾರ್ಥಿಗಳಲ್ಲಿ ಸಂಶೋಧನ ಆಸಕ್ತಿ ಕಡಿಮೆಯಾಗಿದೆ ಎನಿಸುತ್ತಿಲ್ಲವೇ?ಖಂಡಿತಾ ಇಲ್ಲ. ಆದರೆ ಸಂಶೋಧನೆ ಮಾಡಿದ ಮೇಲೆ ಮುಂದೇನು ಎಂಬ ಯೋಚನೆ ಇದೆ. ಈಗ ಸಂಶೋಧನೆ ಮಟ್ಟವೂ ಅಷ್ಟೇ ಎತ್ತರಕ್ಕೆ ಬೆಳೆದಿರುವುದರಿಂದ ಸ್ಪರ್ಧೆ ಮತ್ತು ಸವಾಲುಗಳು ಹೆಚ್ಚಿವೆ. ಅದಕ್ಕೆ ಬೇಕಾಗುವ ಯಂತ್ರ, ಅನುಕೂಲತೆಗಳನ್ನು ವಿಶ್ಲೇಷಿಸಿಕೊಂಡು ಮುಂದುವರಿಯಬೇಕಿದೆ.
ನಮ್ಮ ದೇಶದಲ್ಲಿ ಎಲ್ಲ ಸಂಶೋಧನೆಗಳಿಗೆ ಬೇಕಾದ ಪೂರಕ ವಾತಾವರಣ ಮೂಡಿಸಬೇಕಾದರೆ ವೆಚ್ಚವೂ ಹೆಚ್ಚು. ಸಂಶೋಧನಾ ವಿದ್ಯಾರ್ಥಿಗಳಿಗೆ ಅವಕಾಶಗಳು ನಮ್ಮದೇ ದೇಶದಲ್ಲಿ ಸಿಗುತ್ತದೆ ಎಂಬುದೂ ಕಷ್ಟ. ಅದರಿಂದ ಅವರು ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದೆ. ಎಲ್ಲ ಉಪಕರಣಗಳು ನಮ್ಮಲ್ಲಿ ಇಲ್ಲದ ಕಾರಣ ಹೊಂದಿಸಿಕೊಳ್ಳಲು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಮೇಕ್ ಇನ್ ಇಂಡಿಯಾ, ಇನ್‌ಕ್ಯುಬೇಶನ್ ಸೆಂಟರ್, ಇನ್‌ಸ್ಪೈರ್ ಅವಾರ್ಡ್ ಮುಂತಾದ ಯೋಜನೆಗಳು ಯಶಸ್ವಿಯಾದರೆ ನಮಗೆ ಬೇಕಾದ ಮಟ್ಟದ ವಿದ್ಯಾರ್ಥಿಗಳು ಮುಂದೆ ಸಿಗಬಹದು. . ಅವಕಾಶಗಳ ಕೊರತೆಯಿಂದಾಗಿ ಸ್ವಂತ ಸಂಶೋಧನೆಗಿಂತ ಉದ್ಯೋಗದೆಡೆಗೆ ಒತ್ತು ಕೊಡುತ್ತಿದ್ದಾರೆ?
ಭಾರತೀಯ ವಿದ್ಯಾರ್ಥಿಗಳ ಮನೋಭಾವನೆ ಹೇಗಿರುತ್ತದೆ ಎಂದರೆ ಕಲಿಯುವುದು, ಪರಿಣತಿ ಪಡೆಯುವುದು, ಉದ್ಯೋಗ ಪಡೆಯುವುದು. ಅದರಿಂದಾಚೆಗಿನ ಹೊಸ ಸಾಧ್ಯತೆ, ಹೊಸ ಯೋಚನೆಗಳನ್ನು ಕಲಿಸುವಂತ ಪರಿಪಾಠ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಇಲ್ಲ. ಪಠ್ಯದಾಚೆಗಿನ ಹೊಸತನಗಳನ್ನು ಕಲಿಸುವ ಮನೋಭೂಮಿಕೆ ಶಿಕ್ಷಣ ವ್ಯವಸ್ಥೆಯಲ್ಲೇ ರೂಪುಗೊಳ್ಳಬೇಕು. ಆದರೂ ಹಠ, ಸವಾಲುಗಳೊಂದಿಗೆ ಸಂಶೋಧನೆಯಲ್ಲಿ ಪಳಗಿಕೊಂಡವರೂ ಸಾಕಷ್ಟಿದ್ದಾರೆ.
Related Articles
ಬಾಹ್ಯಾಕಾಶ, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಸರಿಯಾಗಿ ಯೋಚಿಸಿ, ನಿರ್ಧರಿಸಿ. ಜತೆಗೆ ಬೇಕಾದ ಪೂರಕ ಪ್ರಯತ್ನ ಮಾಡಿ. ಯಾವ ಕ್ಷೇತ್ರ, ಯಾವ ಉದ್ಯೋಗ, ಯಾವ ಸಂಶೋಧನೆ ಅಂತ ನಿರ್ಧರಿಸಿ ಮುಂದೆ ಸಾಗಿ. ಜಗತ್ತಿನಲ್ಲೇ ನಾವು ಪ್ರಥಮ ಶ್ರೇಣಿಯಲ್ಲಿದ್ದೇವೆ ಅನ್ನಲು ಅಂತಹ ಪೂರಕ ವಾತಾವರಣ ರೂಪಿಸಬೇಕು. ಅದು ಯುವ ತಲೆಮಾರಿನಿಂದ ಸಾಧ್ಯ.
Advertisement
ಧನ್ಯಾ ಬಾಳೆಕಜೆ