Advertisement
ಅಲ್ಲದೆ 2026ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕಾಭಿವೃದ್ಧಿ ಶೇ. 6.8ರಷ್ಟಿರಲಿದೆ ಎಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೂನ್ ತಿಂಗಳಲ್ಲಿ ಭಾರತದ ಆರ್ಥಿಕ ಪ್ರಗತಿಯ ಮುನ್ನೋಟವನ್ನು ಶೇ. 7ರಿಂದ 7.2ಕ್ಕೆ ಹೆಚ್ಚಿಸಿದ ಬೆನ್ನಲ್ಲೇ ಐಎಂಫ್ ಕೂಡ ತನ್ನ ಮುನ್ನೋಟ ವನ್ನು ಪರಿಷ್ಕರಿಸಿದ್ದು, ಹೊಸ ಲೆಕ್ಕಾ ಚಾರ ವನ್ನು “ವರ್ಲ್ಡ್ ಎಕನಾಮಿಕ್ ಔಟ್‌ಲುಕ್’ ನಲ್ಲಿ ಪ್ರಕಟಿಸಿದೆ. ಭಾರತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಅನುಭೋಗ ಹೆಚ್ಚಳದಿಂದಾಗಿ ಆರ್ಥಿಕಾಭಿವೃದ್ಧಿ ವೇಗ ಕಾಣಲಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.
2024 -25ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕಾಭಿವೃದ್ಧಿ ದರದ ನಿರೀಕ್ಷೆಯನ್ನು ಪರಿ ಷ್ಕರಿ ಸಿರುವ ಐಎಂಎಫ್ ಎಚ್ಚರಿಕೆಯನ್ನೂ ನೀಡಿದೆ. ಹೆಚ್ಚು ತ್ತಿರುವ ಹಣದುಬ್ಬರಗಳು ಬಹ ಳಷ್ಟು ಆರ್ಥಿಕತೆಗಳ ಬೆಳ ವಣಿಗೆಯನ್ನು ನಿಧಾನಗೊಳಿಸಬಹುದು. ಪರಿ ಣಾಮ ಬಡ್ಡಿದರಗಳ ಹೆಚ್ಚಳವು ದೀರ್ಘಾವಧಿಗೆ ಮುಂದುವರಿಯಬಹುದು ಎಂದೂ ತಿಳಿಸಿದೆ.