Advertisement

ಮಹತ್ತರ ಆರ್ಥಿಕ ಸುಧಾರಣೆ, ವೇಗದ ಆರ್ಥಿಕತೆ: ಮೋದಿಗೆ ಕ್ರೆಡಿಟ್‌ : IMF

11:17 AM Oct 09, 2018 | Team Udayavani |

ವಿಶ್ವ ಸಂಸ್ಥೆ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಮಹತ್ತರ ಆರ್ಥಿಕ ಸುಧಾರಣಾ ಕ್ರಮ ಮತ್ತು ಯೋಜನೆಗಳನ್ನು ಪ್ರಶಂಸಿಸಿರುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿರುವ ಐಎಂಎಫ್, ಈ ವರ್ಷ ಮತ್ತು ಮುಂದಿನ ವರ್ಷದ ಮಟ್ಟಿಗೆ ಭಾರತವನ್ನು ವಿಶ್ವದ ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶವನ್ನಾಗಿ ಮಾಡಿರುವುದಕ್ಕೆ ಪಿಎಂ ಮೋದಿಗೆ ಪೂರ್ತಿ ಕ್ರೆಡಿಟ್‌ ನೀಡಿದೆ.

Advertisement

ಬಾಲಿಯಲ್ಲಿ ನಡೆಯಲಿರುವ ಐಎಂಎಫ್ ವಾರ್ಷಿಕ ಸಭೆಗೆ ಮುನ್ನವೇ ಬಿಡುಗಡೆ ಮಾಡಲಾಗಿರುವ ವಿಶ್ವ ಆರ್ಥಿಕ ಹೊರನೋಟ (ಡಬ್ಲ್ಯುಇಓ) ವರದಿಯಲ್ಲಿ  “ಭಾರತದಲ್ಲಿ ಅತ್ಯಂತ ಮಹತ್ವದ ಮತ್ತು ಪ್ರಮುಖ ಆರ್ಥಿಕ ಸುಧಾರಣಾ ಉಪಕ್ರಮಗಳನ್ನು (ಜಿಎಸ್‌ಟಿ ಸೇರಿದಂತೆ) ಅನುಷ್ಠಾನಿಸಲಾಗಿದೆ; ಹಣದುಬ್ಬರವನ್ನು ಹತೋಟಿಯಲ್ಲಿರಿಸುವ ಪರಿಣಾಮಕಾರಿ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೀವಾಳಿ ಸಂಹಿತೆಯನ್ನು ಜಾರಿಗೆ ತರಲಾಗಿದೆ ಮತ್ತು ವಿದೇಶಿ ಹೂಡಿಕೆಯನ್ನು ಉದಾರೀಕರಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಆ ಮೂಲಕ ಸುಲಭದಲ್ಲಿ ಭಾರತದಲ್ಲಿ ಉದ್ಯಮ ಕೈಗೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಐಎಂಎಫ್ ಹೇಳಿದೆ. 

ಈಚಿನ ದಿನಗಳಲ್ಲಿ ಏರುತ್ತಿರುವ ತೈಲ ಬೆಲೆ ಮತ್ತು ಬಿಗಿ ಗೊಳ್ಳುತ್ತಿರುವ ಜಾಗತಿಕ ಹಣಕಾಸು ಸ್ಥಿತಿಗತಿಗಳಿಂದಾಗಿ ಈ ವರ್ಷ ಜುಲೈಯಲ್ಲಿ ಮಾಡಲಾಗಿದ್ದ ಮುಂದಿನ ವರ್ಷದ ಶೇ.7.4ರ ಅಂದಾಜು ಆರ್ಥಿಕ ಪ್ರಗತಿಯನ್ನು (ಜಿಡಿಪಿಯನ್ನು) ಶೇ.0.1ರಷ್ಟು ಇಳಿಸಬೇಕಾಗಿದೆ; ಹಾಗಿದ್ದರೂ ಭಾರತ ವಿಶ್ವದ ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶವಾಗಿ ಮುಂದುವರಿದಿದೆ ಮತ್ತು ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳ ಸಾಲಿನಲ್ಲಿ ಅದು ನಿಲ್ಲುವಂತಾಗಿದೆ’ ಎಂದು ಐಎಂಎಫ್ ವರದಿ ಹೇಳಿದೆ. 

ಈ ವರ್ಷ ಜುಲೈಯಲ್ಲಿ ಮಾಡಲಾಗಿದ್ದ ಭಾರತದ ಆರ್ಥಿಕ ಪ್ರಗತಿಯನ್ನು ಅಂದಾಜನ್ನು ಇದೀಗ ಅದು ಶೇ.7.3ಕ್ಕೆ ಮರು ನಿಗದಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next