Advertisement

ಮುಂಬಯಿಯಲ್ಲಿ ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ಮಳೆ ; ಐಎಂಡಿ ಮುನ್ಸೂಚನೆ

09:58 AM Aug 14, 2020 | Nagendra Trasi |

ಮುಂಬಯಿ: ಮುಂಬಯಿ ಮತ್ತು ನೆರೆಯ ಥಾಣೆ, ಪಾಲ್ಗರ್ ಮತ್ತು ರಾಯಗಢ ಜಿಲ್ಲೆಗಳ ಪ್ರತ್ಯೇಕ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

Advertisement

ಮುಂಬಯಿ ಮತ್ತು ನೆರೆಯ ಪ್ರದೇಶಗಳ ಪ್ರತ್ಯೇಕ ಸ್ಥಳಗಳಲ್ಲಿ ಗುರುವಾರವೂ ಮಳೆ ಮುಂದುವರಿದೆ. ಮುಂದಿನ ಒಂದು ದಿನದಲ್ಲಿ ಕೊಂಕಣ ಪ್ರದೇಶ ಮತ್ತು ಮಧ್ಯ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಅದು ಮುನ್ಸೂಚನೆ ನೀಡಿದೆ.

ಮುಂಬಯಿಯ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಗುರುವಾರ ಬೆಳಗ್ಗೆ 8.30ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 70 ಮಿ.ಮೀ. ನಿಂದ 100 ಮಿ.ಮೀ. ಪ್ರಮಾಣದಲ್ಲಿ ಭಾರೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಲ್ಲದೆ ಥಾಣೆಯ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ 120 ಮಿ.ಮೀ. ಗಿಂತ ಹೆಚ್ಚಿನ ಮಳೆಯಾಗಿದೆ. ಅದೇ ರಾಯಗಢದ ಮಾಥೆರಾನ್‌ ಗಿರಿಧಾಮ ಪಟ್ಟಣದಲ್ಲಿನ ವೀಕ್ಷಣಾಲಯವು ಈ ಅವಧಿ ಯಲ್ಲಿ 161.4 ಮಿ.ಮೀ. ಮಳೆ ದಾಖಲಿ ಸಿದೆ ಎಂದು ಐಎಂಡಿ ತಿಳಿಸಿದೆ.

Advertisement

ಐಎಂಡಿ ಪ್ರಕಾರ, ಕರಾವಳಿ ಪಾಲ್ಗರ್ ನ ಡಹಾಣು ಹವಾಮಾನ ಕೇಂದ್ರವು ಕಳೆದ 24 ಗಂಟೆಗಳಲ್ಲಿ 90.1 ಮಿ.ಮೀ. ಮಳೆಯಾಗಿದೆ ಎಂದು ವರದಿ ಮಾಡಿದೆ, ಥಾಣೆಯ ಬೇಲಾಪುರ ಇಂಡಸ್ಟ್ರೀಸ್‌ ಅಸೋಸಿಯೇಶನ್‌ ವೀಕ್ಷಣಾಲಯದಲ್ಲಿ 57.2 ಮಿ.ಮೀ. ಮಳೆ ದಾಖಲಾಗಿದೆ.

ಮುಂದಿನ ಎರಡು ಗಂಟೆಯಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದಿರುವುದಾಗಿ ಹವಾಮಾನ ಇಲಾಖೆ ಹೇಳಿದೆ.ಬುಧವಾರವೂ ಕೂಡಾ ಹವಾಮಾನ ಇಲಾಖೆ ರಾಯ್ ಗಢ್, ನಾಸಿಕ್ ಮತ್ತು ಪುಣೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಬ್ರೌನ್ ಅಲರ್ಟ್ ಹೊರಡಿಸಿತ್ತು. ಗುರುವಾರ ದೆಹಲಿಯ ಹಲವೆಡೆ ಭಾರೀ ಮಳೆಯಾಗಿತ್ತು.

ಮಧ್ಯ ಮಹಾರಾಷ್ಟ್ರದ ಕೊಂಕಣ ಮತ್ತು ಘಾಟಿ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿಮತ್ತಷ್ಟು ಮಳೆಯಾಗಬಹುದು. ನಂದುಬಾರì, ಧುಳೆಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿಯ ಮುಂಬಯಿ ವಿಭಾಗದ ಉಪ ಮಹಾನಿರ್ದೇಶಕ ಕೆ. ಎಸ್‌. ಹೊಸಳಿಕರ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next