Advertisement

ಮುಂದಿನ 48 ತಾಸುಗಳಲ್ಲಿ ಒಡಿಶಾದಲ್ಲಿ ಭಾರೀ ಮಳೆ ಮುನ್ಸೂಚನೆ

03:32 PM Jul 22, 2017 | udayavani editorial |

ಭುವನೇಶ್ವರ : ಮುಂದಿನ 48 ತಾಸುಗಳಲ್ಲಿ ಉತ್ತರ ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

“ಮುಂದಿನ 48 ತಾಸುಗಳಲ್ಲಿ ಉತ್ತರ ಒಡಿಶಾದ ಒಂದೆರಡು ಕಡೆಗಳಲ್ಲಿ  ಭಾರೀ ಮಳೆಯಾಗಲಿದೆ; ಜು.26ರ ತನಕವೂ ಉತ್ತರ ಪ್ರಾಂತ್ಯದಲ್ಲಿ ಜಡಿ ಮಳೆಯಾಗುವ ನಿರೀಕ್ಷೆ ಇದೆ’ ಎಂದು ಇಲಾಖೆ ತಿಳಿಸಿದೆ. 

ಜುಲೈ 15ರಿಂದ ಒಡಿಶಾದಲ್ಲಿ, ವಿಶೇಷವಾಗಿ ಕಟಕ್‌ ಮತ್ತು ಭುವನೇಶ್ವರದಲ್ಲಿ  ನಿರಂತರವಾಗಿ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿವೆ. ಪರಿಣಾಮವಾಗಿ ಸರಕಾರ ಜಿಲ್ಲಾಡಳಿತಗಳಿಗೆ ಮುನ್ನೆಚ್ಚರಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next