ಬೆಂಗಳೂರು: ಐಎಂಎ ಹಗರಣದ ಪ್ರಮುಖ ಆರೋಪಿ ಮತ್ತು ಐಎಂಎ ಕಂಪೆನಿಗಳ ಸಮೂಹದ ಪ್ರವರ್ತಕ ಮನ್ಸೂರ್ ಖಾನ್, ಬನ್ನೇರುಘಟ್ಟ ರಸ್ತೆಯಲ್ಲಿರುವ ತನ್ನ ಅಪಾರ್ಟ್‌ಮೆಂಟ್ ಮಾರಾಟಕ್ಕೆ ವಿಶೇಷ ನ್ಯಾಯಾಲಯ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿ, ರಾಜ್ಯ ಸರಕಾರ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಅರ್ಜಿದಾರರ ಪರ ವಕೀಲರು, ಕೆಪಿಐಡಿಎಫ್‌ಇ ಕಾಯ್ದೆಯಡಿಯಲ್ಲಿ ವ್ಯಾಖ್ಯಾನಿಸಲಾದ ಹೂಡಿಕೆಗಳು ಠೇವಣಿ ವ್ಯಾಖ್ಯಾನದೊಳಗೆ ಬರುವುದಿಲ್ಲ ಎಂಬ ವಾದವನ್ನು ವಿಶೇಷ ಕೋರ್ಟ್ ಪರಿಗಣಿಸಿಲ್ಲ.
ಇದನ್ನೂ ಓದಿ:ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ದಿಲ್ಲಿ ಕೋರ್ಟ್ ತಡೆ
ಐಎಂಎ ಗುಂಪಿನ ಭಾಗವಾಗಿರುವ ಬಹುತೇಕ ಘಟಕಗಳು ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗಳು (ಎಲ್‌ಎಲ್‌ಪಿಗಳು) ಮತ್ತು ಎಲ್ಲ ಹೂಡಿಕೆದಾರರು ತಂದಿದ್ದರಿಂದ ಸಂಸ್ಥೆಗಳಲ್ಲಿ ಬಂಡವಾಳ ಕೊಡುಗೆಯ ಮೂಲಕ ಮಾಡಿದ ಹೂಡಿಕೆಯನ್ನು ಕೆಪಿಐಡಿಎಫ್‌ಇ ಕಾಯ್ದೆಯಡಿಯಲ್ಲಿ ಠೇವಣಿ ವ್ಯಾಖ್ಯಾನದಿಂದ ನಿರ್ದಿಷ್ಟವಾಗಿ ಹೊರಗಿಡಲಾಗಿದೆ ಎಂದರು.