Advertisement

ಐಎಂಎ ಪ್ರಕರಣ ಸಿಬಿಐಗೆ

09:14 AM Aug 22, 2019 | sudhir |

ಬೆಂಗಳೂರು: ದೂರವಾಣಿ ಕರೆ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವ ರಾಜ್ಯ ಸರಕಾರ ಅದರ ಬೆನ್ನಲ್ಲೇ ಬಹುಕೋಟಿ ವಂಚನೆಯ ಐಎಂಎ ಪ್ರಕರಣವನ್ನೂ ಕೇಂದ್ರ ತನಿಖಾ ದಳಕ್ಕೆ ವಹಿಸಿದೆ.

Advertisement

ಕಾಂಗ್ರೆಸ್‌ನ ಇಬ್ಬರು ಮಾಜಿ ಸಚಿವರು ಭಾಗಿಯಾಗಿದ್ದಾರೆ ಎನ್ನಲಾದ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದ್ದ ಐಎಂಎ ಪ್ರಕರಣ ವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಅನೇಕ ಮುಸ್ಲಿಂ ಮುಖಂಡರು. ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದವರು ಹಾಗೂ ಅನೇಕ ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿತ್ತು. ಹಿಂದಿನ ಮೈತ್ರಿ ಸರಕಾರ ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿತ್ತು.

ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ನೀಡುವುದಾಗಿ ಭರವಸೆಯಿತ್ತು ವಂತಿಗೆ ಸಂಗ್ರಹಿಸಿ ಸಾವಿರಾರು ಜನರಿಗೆ ಮೋಸ ಮಾಡಿ ವಿದೇಶಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಐಎಂಎ ಮುಖ್ಯಸ್ಥ ಮನ್ಸೂರ್‌ ಖಾನ್‌ ವಿರುದ್ಧ ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕಂದಾಯ ಇಲಾಖೆಯೂ ಕೂಡ ಹಣ ವಂಚನೆ, ಆರ್ಥಿಕ ಅವ್ಯವ ಹಾರ, ಕಾನೂನುಬಾಹಿರವಾಗಿ ಹಣ ವರ್ಗಾವಣೆ, ಜನರ ಹಣ ದುರುಪ ಯೋಗದ ಹಿನ್ನೆಲೆಯಲ್ಲಿ ಐಎಂಎ ಸಂಸ್ಥೆಗೆ ಸೇರಿದ ಹಲವು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ದೂರಿನಲ್ಲಿ ಸೇರಿಸಲಾಗಿತ್ತು.

ಐಎಂಎ ಸಂಸ್ಥೆಯಲ್ಲಿ ಹೊರ ರಾಜ್ಯ, ಹೊರ ದೇಶಗಳಲ್ಲಿ ವಾಸ ವಾಗಿರುವವರೂ ಹಣ ಹೂಡಿಕೆ ಮಾಡಿದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next