Advertisement
ಆರೋಪಿ ಮನ್ಸೂರ್ ಸೇರಿ 28 ಮಂದಿ ವಿರುದ್ಧ ಆರೋಪಪಟ್ಟಿಸಲ್ಲಿಸಿದ್ದು, ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಹೆಸರುಗಳನ್ನೂ ಉಲ್ಲೇ ಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾವಿರಾರು ಗ್ರಾಹಕರು ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದರು. ಸ್ಥಳೀಯ ಪೊಲೀಸರು ಕೆಪಿಐಡಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಲ್ಲ. ಅಲ್ಲದೆ, ಕಂದಾಯ ಅಧಿಕಾರಿಗಳು ಸಹ ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ ಆರೋಪಿ ಪರವಾಗಿಯೇ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಬಳಿಕವೂ ಸಾವಿರಾರು ಕೋ. ರೂ. ಹಣ ವಸೂಲಿ ಮಾಡಿ ವಂಚಿಸಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಕರ್ತವ್ಯ ಲೋಪ
ಆರ್‌ಬಿಐ 2016 ಆ. 12ರಂದು ರಾಜ್ಯ ಡಿಜಿಪಿಗೆ ಪತ್ರ ಮೂಲಕ ಐಎಂಎ ಬಗ್ಗೆ ನಿಗಾ ವಹಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಆಗ ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಮೂಲಕ ಕಮರ್ಷಿಯಲ್ ಸ್ಟ್ರೀಟ್ ಇನ್‌ಸ್ಪೆಕ್ಟರ್ ರಮೇಶ್‌ಗೆ ಈ ಪತ್ರವನ್ನು ರವಾನಿಸಲಾಗಿತ್ತು. ಅದರೆ, ಸರಿಯಾಗಿ ತನಿಖೆ ನಡೆಸದೆ, ಕಂಪೆನಿ ಕಾನೂನು ರೀತಿಯಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ರಮೇಶ್ ಅವರು ಡಿಸಿಪಿ ಅಜಯ್ ಹಿಲೋರಿಗೆ ವರದಿ ನೀಡಿದ್ದರು. 2016ರ ಆ.29ರಂದು ರಮೇಶ್ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.
Related Articles
Advertisement