Advertisement

ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ : ಡಿಕೆಶಿಗೆ ರಮ್ಯಾ ತಿರುಗೇಟು!

05:04 PM May 11, 2022 | Team Udayavani |

ಬೆಂಗಳೂರು : ರಕ್ಷಣೆಗೆ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ್ದಾರೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಎಂ.ಬಿ.ಪಾಟೀಲ್ ಹಾಗೂ ಅಶ್ವತ್ಥ್ ನಾರಾಯಣ್ ಭೇಟಿಯನ್ನ ನಟಿ, ಮಾಜಿ ಸಂಸದೆ ರಮ್ಯಾ ಸಮರ್ಥಿಸಿಕೊಂಡಿದ್ದಾರೆ.

Advertisement

ಟ್ವೀಟ್ ಮಾಡಿರುವ ರಮ್ಯಾ ಅವರು, ”ಪಕ್ಷಾತೀತವಾಗಿ ಜನರು ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಕೆಲವರು ಕುಟುಂಬಗಳಲ್ಲಿ ಮದುವೆಯೂ ಆಗುತ್ತಾರೆ. ಇದರ ಬಗ್ಗೆ ಹೇಳುತ್ತೇನೆ. ನನಗೆ ಆಶ್ಚರ್ಯವಾಗಿದೆ ಡಿ.ಕೆ. ಶಿವಕುಮಾರ್ ಅವರೇ ,  ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣದಿಂದ ರಕ್ಷಣೆ ಕೋರಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಪಕ್ಷದ ಪ್ರಬಲ ನಾಯಕ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು.. ಪಾಟೀಲ್ ಮತ್ತು ಅಶ್ವತ್ಥನಾರಾಯಣ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ಹಿರಿಯ ಸಹೋದ್ಯೋಗಿಯ ಮೇಲೆಯೇ ಡಿಕೆಶಿ ಇಂತಹ ಹೇಳಿಕೆ ನೀಡಬಾರದಿತ್ತು ಎಂದು ಹಲವು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದು, ಕಾಂಗ್ರೆಸ್ ನಲ್ಲಿ ಹೊಸ ಸಂಘರ್ಷ ಹುಟ್ಟು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next