Advertisement

ಮಂಪರು ಪರೀಕ್ಷೆಗೆ ನಾನು ಸಿದ್ಧ: ಶೋಭಾ

06:05 AM Oct 29, 2017 | |

ಬೆಂಗಳೂರು: “ವಿದ್ಯುತ್‌ ಖರೀದಿ ಹಗರಣ ಆರೋಪದ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ನನ್ನನ್ನು ರಾಜಕೀಯವಾಗಿ ಹಣಿಯಲು ನೋಡಿದರೆ ನಾನೂ ರಾಜಕೀಯವಾಗಿಯೇ ಎದುರಿಸುತ್ತೇನೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Advertisement

ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಕಳೆದ 20 ವರ್ಷಗಳ ವಿದ್ಯುತ್‌ ಖರೀದಿ ಬಗ್ಗೆ ಸಿಬಿಐ ತನಿಖೆಗೆ ವಹಿಸಲಿ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ನನ್ನನ್ನು ಮಾಧ್ಯಮದ ಮುಂದೆಯೇ ಮಂಪರು ಪರೀಕ್ಷೆಗೆ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಎರಡೂವರೆ ವರ್ಷ ಇಂಧನ ಸಚಿವೆಯಾಗಿ ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ ವಿದ್ಯುತ್‌ ಸ್ವಾವಲಂಬನೆ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇನೆ. ಸಮರ್ಥ ಅಧಿಕಾರಿಗಳನ್ನು ಇಲಾಖೆಗೆ ನಿಯೋಜಿಸಿ ಮಾದರಿ ಕೆಲಸ ಮಾಡಿದ್ದೇನೆ. ಹೀಗಾಗಿ, ನನಗೆ ಯಾವ ಅಂಜಿಕೆಯೂ ಇಲ್ಲ ಎಂದರು. ಬ್ಲಾಕ್‌ಲಿಸ್ಟ್‌ ಮಾಡಲಾಗಿದ್ದ ಕಂಪನಿಯಿಂದ 477 ಕೋಟಿ ರೂ. ನೀಡಿ ಕಲ್ಲಿದ್ದಲ್ಲು ಖರೀದಿಸಿದ ಹಗರಣ ಬಯಲು ಮಾಡಿದ್ದಕ್ಕೆ ವಿದ್ಯುತ್‌ ಖರೀದಿಯಲ್ಲಿ ಹಗರಣವಾಗಿದೆ ಎಂದು ಸದನ ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ನಮ್ಮ ಪಕ್ಷದ ಸದಸ್ಯರು ಏನೆಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದೂ ವರದಿಯಲ್ಲಿ ತಿಳಿಸಲಿ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next