Advertisement

ನಾನು ಹಾಗೆಲ್ಲ ಮಲಗಲ್ಲ : ಮತ್ತೆ ವಿವಾದಕ್ಕೆ ಗುರಿಯಾದ ಸ್ಪೀಕರ್‌ !

03:05 PM Mar 21, 2019 | Team Udayavani |

ಕೋಲಾರ: ಲೋಕಸಭಾ ಚುನಾವಣಾ ಕಾವು ಏರುತ್ತಿರುವ ವೇಳೆಯಲ್ಲೇ ಕಾಂಗ್ರೆಸ್‌ ನಾಯಕರ ನಡುವೆ ಭಿನ್ನಮತ ಭುಗಿಲೆದ್ದಿದ್ದು , ಬಹಿರಂಗವಾಗಿ ಕೀಳು ಮಾತುಗಳ ವಾಗ್ಸಮರವೂ ನಡೆದಿದೆ.

Advertisement

 ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸಂಸದ ಕೆ.ಎಚ್‌.ಮುನಿಯಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ  ನೀಡುವ ವೇಳೆ ಆಡಿರುವ ಮಾತುಗಳು ಇದೀಗ ವಿವಾದಕ್ಕೆ ಗುರಿಯಾಗಿದೆ. 

ನಾನು ಮತ್ತು ರಮೇಶ್‌ ಕುಮಾರ್‌ ಅವರು ಗಂಡ ಹೆಂಡತಿ ಇದ್ದಹಾಗೆ ಎಂದಿದ್ದ ಮುನಿಯಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಮೇಶ್‌ ಕುಮಾರ್‌ ನಾನು ಹಾಗೆಲ್ಲ ಮಲಗಲ್ಲ. ನನಗೆ ಹಾಗೆಲ್ಲ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ. 

ನಾನು ಗೌರವಯುತವಾಗಿ ಸಪ್ತಪದಿ ತುಳಿದು ಮದುವೆ ಆದ ಹೆಣ್ಣಿನೊಂದಿಗೆ ಮಾತ್ರ ಸಂಬಂಧ ಹೊಂದಿದ್ದು, ಯಾವುದೇ ಅನೈತಿಕ ಸಂಬಂಧ ನನಗಿಲ್ಲ ಎಂದರು. 

‘ಅವರಿಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹದು ಆದರೆ ನನಗಿಷ್ಟ ಇಲ್ಲ’ ಎಂದರು. 

Advertisement

ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸದನದಲ್ಲಿ ರೇಪ್‌ ಕುರಿತಾಗಿನ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next