Advertisement
ಹೀಗೆ ರಾಜ್ಯದ ಕೃಷಿಕರ ಕುರಿತು, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗಿರುವ ಅರಿವಿನ ಕುರಿತು ಮನದಾಳದ ಮಾತು ಬಿಚ್ಚಿಟ್ಟಿದ್ದು ಚಿತ್ರನಟ ಕಿಚ್ಚ ಸುದೀಪ್. ಅಂದಹಾಗೆ ಸುದೀಪ್ ರೈತಕ ಕುರಿತು ಮಾತನಾಡಲು ವೇದಿಕೆಯಾದದ್ದು “ವಿ ರೆಸ್ಪೆಕ್ಟ್ ಫಾರ್ಮರ್’ (ನಾವು ರೈತರನ್ನು ಗೌರವಿಸುತ್ತೇವೆ) ಟ್ರಸ್ಟ್ ವತಿಯಿಂದ ಬುಧವಾರ ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ರೈತ ಸ್ನೇಹಿ ಯೋಜನೆಯ ಲಾಂಛನ ಲೋಕಾರ್ಪಣೆ ಹಾಗೂ ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ.
ರೈತರಿಗೆ ಗೌರವ ಸಿಗುತ್ತಿಲ್ಲ: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ಹೆಗ್ಡೆ ಅವರು ಮಾತನಾಡಿ, ನಮ್ಮ ಸಮುದಾಯದಲ್ಲಿ ರೈತರಿಗೆ ಸಿಗಬೇಕಾದ ಗೌರವ ಮತ್ತು ಆದ್ಯತೆ ಸಿಗುತ್ತಿಲ್ಲ. ರೈತರು ಮಧ್ಯವರ್ತಿಗಳಿಂದ ವಂಚಿತರಾಗುತ್ತಿದ್ದು, ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಅನ್ನದಾತರನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು ಎಂದರು. ಶ್ರೀಮಂತಿಕೆ ಪೂಜೆ: ಶ್ರೀಮಂತಿಕೆಯನ್ನು ಪೂಜಿಸುವ ಈ ಸಮಾಜದಲ್ಲಿ ರೈತರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ. ರೈತರು ಕೂಡ ಆಡಂಬರ ಜೀವನ ಬಿಟ್ಟು, ಸರಳ ಜೀವನದ ಮೊರೆ ಹೋಗಬೇಕು. ಇದ್ದುದರಲ್ಲಿ ಜೀವನ ಸಾಗಿಸುವ ಮೂಲಕ ಸಾಲದಿಂದ ಮುಕ್ತರಾಗಿ ಬದುಕುವಂತಾದಾಗ ಮಾತ್ರ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದು ಸಲಹೆ ನೀಡಿದರು.
Related Articles
Advertisement
ನಾನು ಚಿತ್ರರಂಗಕ್ಕೆ ಬಂದು ತುಂಬಾ ವರ್ಷವಾಯ್ತು. ವಾಸ್ತವ ಏನೆಂದರೆ ನಾನು ದುಡಿದಿರೋದು ತುಂಬಾ ಕಮ್ಮಿ. ಚಿತ್ರರಂಗಕ್ಕೆ ತುಂಬಾ ದುಡಿದಿದ್ದೇನೆ. ಆದರೂ, ನಮ್ಮ ಮನೆಯಲ್ಲಿ ಅಲ್ಪಸ್ವಲ್ಪ ಇದ್ದರೆ, ಮೂರ್‍ನಾಲ್ಕು ಕಾರುಗಳನ್ನು ತೆಗೆದುಕೊಂಡಿದ್ದೇನೆ. ಅದರಲ್ಲಿ ಪ್ರಿಯವಾಗಿರುವ ಒಂದು ಕಾರನ್ನು ಮಾರಿ ಅದರಿಂದ ಬಂದ ಹಣವನ್ನು ಈ ಟ್ರಸ್ಟ್‌ಗೆ ಕೊಡುತ್ತೇನೆ. ಮಿಕ್ಕಿದ್ದು ಭಗವಂತ ಶಕ್ತಿ ಕೊಟ್ಟರೆ ಮುಂದೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. -ಸುದೀಪ್, ಚಿತ್ರ ನಟ