Advertisement

ಜೀವಂತವಾಗಿದ್ದೇನೆ: ಪಾಕ್‌ ಬೌಲರ್‌ ಇರ್ಫಾನ್‌ ಸ್ಪಷ್ಟನೆ

02:30 AM Jun 23, 2020 | Sriram |

ಕರಾಚಿ: ತನ್ನ ಸಾವಿನ ಬಗ್ಗೆ ಹಬ್ಬಿರುವ ಸುದ್ದಿಗೆ ಪಾಕಿಸ್ಥಾನದ ವೇಗಿ ಮೊಹಮ್ಮದ್‌ ಇರ್ಫಾನ್‌ ಪ್ರತಿಕ್ರಿಯಿಸಿದ್ದು, “ಇದು ಆಧಾರರಹಿತ ಸುದ್ದಿ, ನಾನು ಜೀವಂತವಾಗಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

ರವಿವಾರ ಮೊಹಮ್ಮದ್‌ ಇರ್ಫಾನ್‌ ಕಾರು ಅಪಘಾತವೊಂದರಲ್ಲಿ ದುರ್ಮರಣಕ್ಕೀಡಾದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು.

ತೀವ್ರ ಆಘಾತವಾಗಿದೆ “ಅಪಘಾತವೂ ಇಲ್ಲ, ಏನೂ ಇಲ್ಲ. ಇದೆಲ್ಲವೂ ಸುಳ್ಳು ಸುದ್ದಿ. ನಾನು ಆರೋಗ್ಯವಾಗಿದ್ದೇನೆ. ಇದರಿಂದ ನನಗೆ, ನನ್ನ ಕುಟುಂಬಕ್ಕೆ ತೀವ್ರ ಆಘಾತವಾಗಿದೆ. ಎಲ್ಲ ಕಡೆಗಳಿಂದ ಒಂದೇ ಸಮನೆ ಕರೆಗಳು ಬರುತ್ತಿವೆ. ದಯವಿಟ್ಟು ಇಂಥ ವಿಕೃತ ಸುದ್ದಿಗಳನ್ನು ಹಬ್ಬಿಸುವ ಕೆಲಸ ಮಾಡಬೇಡಿ’ ಎಂದು ಎಡಗೈ ಪೇಸ್‌ ಬೌಲರ್‌ ಇರ್ಫಾನ್‌ ವಿನಂತಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next