ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಮತ್ತು ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ತಾನು ಆಡುತ್ತಿರುವುದಾಗಿ ನಾಯಕ ವಿರಾಟ್ ಕೊಹ್ಲಿ ಹೇಳಿದರು. ಕಳೆದ ಪಂದ್ಯದಲ್ಲಿ ಗಾಯಗೊಂಡ ವೇಗಿ ಸಿರಾಜ್ ಅಲಭ್ಯರಾಗಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಈ ಕುರಿತು ಸ್ಪಷ್ಟಪಡಿಸಿದ್ದಾರೆ.
ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ. ಸಿರಾಜ್ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಸಿರಾಜ್ ಪಂದ್ಯಕ್ಕೆ ಸಿದ್ಧರಾಗಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಮತ್ತು 110% ಫಿಟ್ ಇಲ್ಲದ ವೇಗಿಗಳನ್ನು ಆಡುವ ಅಪಾಯವನ್ನು ನಾವು ತೆಗೆದುಕೊಳ್ಳಬಹುದೆಂದು ನಾನು ಭಾವಿಸುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
“ನಾವು ಇಂದು ವೇಗದ ಬೌಲರ್‌ಗಳ ಉತ್ತಮ ಗುಂಪನ್ನು ಹೊಂದಿದ್ದೇವೆ, ಯಾರನ್ನು ಆಡಬೇಕು ಎಂಬುದರ ಕುರಿತು ನಾವು ಗೊಂದಲಕ್ಕೊಳಗಾಗಿದ್ದೇವೆ” ಎಂದು ವೇಗಿಗಳ ಕುರಿತಾಗಿ ವಿರಾಟ್ ಹೇಳಿದರು.
ಇದನ್ನೂ ಓದಿ:ಕೆಕೆಆರ್ ನ ‘ಮಾಸ್ಟರ್ ಸ್ಟ್ರೋಕ್’ ಟ್ವೀಟ್ ಗೆ ವ್ಯಂಗ್ಯವಾಡಿದ ರವೀಂದ್ರ ಜಡೇಜಾ
ಬೆನ್ನು ನೋವಿನ ಕಾರಣ ವಿರಾಟ್ ಕೊಹ್ಲಿ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು. ವಿರಾಟ್ ಬದಲಿಗೆ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಿದ್ದರು. ಮೂರನೇ ಪಂದ್ಯಕ್ಕೆ ವಿರಾಟ್ ವಾಪಸಾತಿಯಿಂದ ಹನುಮ ವಿಹಾರಿ ಜಾಗಕ್ಕೆ ಕುತ್ತು ಬರುವುದು ಬಹುತೇಕ ಖಚಿತವಾಗಿದೆ. ಸಿರಾಜ್ ಬದಲಿಗೆ ಇಶಾಂತ್ ಶರ್ಮಾ ಅಥವಾ ಉಮೇಶ್ ಯಾದವ್ ಆಡುವ ಅವಕಾಶ ಪಡೆಯಬಹುದು.