Advertisement
ಅಕ್ಕಿ ಗಿರಣಿಯ ಮುಖ್ಯ ಬಾಗಿಲು ಮುಚ್ಚಿ ಪಕ್ಕದಲ್ಲಿರುವ ಕಿರಿಯ ಬಾಗಿಲು ತೆರೆದು ಅಕ್ಕಿಯನ್ನು ರೀ ಪಾಲಿಶ್ ಮಾಡಿ ಅಕ್ಕಿ ಮತ್ತು ನುಚ್ಚಕ್ಕಿ ಬೇರ್ಪಡಿಸಿ ತಲಾ 25 ಕೆ.ಜಿಯಂತೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಮಯೂರ ಬ್ರಾಂಡ್ ಹೆಸರಿನಲ್ಲಿ ಸಿದ್ಧಗೊಳಿಸುತ್ತಿರುವಾಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸವಿತಾ ಹಾಗೂ ಆಹಾರ ಇಲಾಖೆಯ ಶಿರಸ್ತೆದಾರ್ ದಾಳಿ ನಡೆಸಿದ್ದಾರೆ.
Related Articles
Advertisement
ಈ ಹಿಂದೆಯೂ 350 ಕ್ವಿಂಟಲ್ ಅಕ್ಕಿ, ನುಚ್ಚಕ್ಕಿ ಜಪ್ತಿ ಮಾಡಿ ಕೇಸು ದಾಖಲುಈ ಹಿಂದೆ 4.6.2021ರಂದು ಈ ಅಕ್ಕಿ ಗಿರಣಿಯಲ್ಲಿ ಅನ ಧಿಕೃತವಾಗಿ ರೀ ಪಾಲಿಶ್ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ ಸರ್ಕಾರದ ವಿವಿಧ ಯೋಜನೆಗಳ 350 ಕ್ವಿಂಟಲ್ ಅಕ್ಕಿ ಮತ್ತು ನುಚ್ಚಕ್ಕಿಯನ್ನು ಜಪ್ತಿ ಮಾಡಿ ಅದೇ ದಿನದಂದು ಚಿಕ್ಕಬಳ್ಳಾಪುರ ತಾಲೂಕು ನಂದಿ ಗಿರಿಧಾಮ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ, ಅಕ್ಕಿ ಗಿರಣಿದಾರರು ಸಾರ್ವಜನಿಕರಿಂದ ಸರ್ಕಾರದ ವಿವಿಧ ಯೋಜನೆಗಳ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಅದನ್ನು ರೀ ಪಾಲಿಶ್ ಮಾಡಿ ಅಕ್ರಮವಾಗಿ ಬೇರೆ ಬೇರೆ ನಕಲಿ ಬ್ರಾಂಡ್‌ಗಳ ಹೆಸರಿನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿರುವುದು ಕಂಡುಬಂದಿದೆ. ಸಾರ್ವಜನಿಕರು, ಪಡಿತರ ಚೀಟಿದಾರರರು ತಮ್ಮ ಹಕ್ಕಿನ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡು ವುದು ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016ರ ಅನ್ವಯ ಅಪರಾಧವಾಗಿದ್ದು, ಅಂತಹ ಪಡಿತರ ಚೀಟಿ ನಿಯಮಾನುಸಾರ 6 ತಿಂಗಳ ಕಾಲ ಅಮಾನತುಪಡಿಸಲಾಗುವುದೆಂದು ಇಲಾಖೆ ಅ ಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.