Advertisement

ಅಕ್ರಮ ಮದ್ಯ ಮಾರಾಟ ವಿರುದ್ಧ  ಹಕ್ಕೊತ್ತಾಯ

08:35 AM Aug 17, 2017 | Team Udayavani |

ವೇಣೂರು : ಜನಜಾಗೃತಿ ವೇದಿಕೆ ನಾರಾವಿ ವಲಯ, ಗ್ರಾಮ ಸಮಿತಿ, ನವಜೀವನ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ನಾರಾವಿ ವಲಯದ ಮುಖಾಂತರ 5 ಪಂಚಾಯತ್‌ಗಳಿಗೆ ಮದ್ಯ ಮಾರಾಟ ವಿರುದ್ಧ ಬೃಹತ್‌ ಹಕ್ಕೊತ್ತಾಯ ಮನವಿಯನ್ನು ನೀಡಲಾಯಿತು.

Advertisement

ಆಯಾಯ ಪಂಚಾಯತ್‌ಗಳಿಗೆ ಸಂಬಂಧಪಟ್ಟಂತಹ ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ಅಕ್ರಮ ಮದ್ಯ ಮಾರಾಟ, ಬಸ್‌ ನಿಲ್ದಾಣಗಳಲ್ಲಿ, ದೇವಸ್ಥಾನ, ಶಾಲಾ ಬಳಿ ಬೀಡಿ, ಸಿಗರೇಟ್‌ ಸೇವನೆ, ಮದ್ಯ ಮರಾಟ, ಜೂಜುಗಾರಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಹಕ್ಕೊತ್ತಾಯ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ವಲಯ ಜನ ಜಾಗƒತಿ ಸಮಿತಿ  ಅಧ್ಯಕ್ಷ ಜಯರಾಜ್‌ ಹೆಗ್ಡೆ, ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ವಸಂತ ಗುಣನೀಲ, ಸದಾನಂದ ಗೌಡ, ವಲಯ ಮೇಲ್ವಿಚಾರಕ ಗಿರೀಶ್‌ ಕುಮಾರ್‌, ಎಲ್ಲಪ್ಪ ನಾಯ್ಕ ಕಾಶಿಪಟ್ಣ, ರಾಜು ಶೆಟ್ಟಿ ಕೊಕ್ರಾಡಿ, ಸದಾನಂದ, ಒಕ್ಕೂಟದ ಅಧ್ಯಕ್ಷರಾದ ಯಶೋದರ್‌ ಬಂಗೇರ, ಸದಾಶಿವ, ಸೇವಾಪ್ರತಿನಿಧಿಗಳಾದ ಶಶಿಕಲಾ, ಹರಿಣಾಕ್ಷಿ, ಕೇಶವ್‌, ನಾರಾಯಣ್‌, ಶಶಿಧರ್‌, ಭಾಗ್ಯಾ, ಪುಷ್ಪಾವತಿ, ಲೀಲಾವತಿ, ಶಶಿಕಲಾ ಉಪಸ್ಥಿತರಿದ್ದರು.

ನಾರಾವಿ, ಅಂಡಿಂಜೆ, ಮರೋಡಿ, ಕಾಶಿಪಟ್ಣ ಹಾಗೂ ಸುಲ್ಕೇರಿ ಗ್ರಾ.ಪಂ.ಗಳಿಗೆ ಈ ಹಕ್ಕೊತ್ತಾಯ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next