Advertisement

ಮಡಿಕೇರಿ: ಮರಗಳ ಅಕ್ರಮ ದಾಸ್ತಾನು; ಮೂವರ ಬಂಧನ

06:47 PM Sep 22, 2022 | Team Udayavani |

ಮಡಿಕೇರಿ: ವೀರಾಜಪೇಟೆ ತಾಲ್ಲೂಕಿನ ಕುಂಬೇರಿ ಗ್ರಾಮದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಕಡಿದು ಸಂಗ್ರಹಿಸಿಡಲಾಗಿದ್ದ 2 ಲಕ್ಷ ರೂ. ಮೌಲ್ಯದ  ಮರದ ನಾಟಾಗಳನ್ನು ವಿರಾಜಪೇಟೆ ಆರಣ್ಯ ವಲಯದ ಸಿಬ್ಬಂದಿಗಳು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

Advertisement

ಅಮ್ಮತ್ತಿ ಬಳಿಯ ಆನಂದಪುರ ಗ್ರಾಮದ ಚರಣ್‌ ರಾಜ್‌, ನೆಲ್ಯಹುದಿಕೇರಿ ಗ್ರಾಮದ ರಶೀದ್‌ ಹಾಗೂ ಹಸೆನಾರ್‌ ಈ.ಕೆ. ಬಂಧಿತ ಆರೋಪಿಗಳು.

ಅಮ್ಮತ್ತಿ ಬಳಿಯ ಕುಂಬೇರಿ ಗ್ರಾಮದ ಕಾಫಿ ತೋಟದಲ್ಲಿ ಅಕ್ರಮವಾಗಿ ಹಲಸು ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ನಾಟಾಗಳಾಗಿ ಪರಿವರ್ತಿಸಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ವಿರಾಜಪೇಟೆ ಆರಣ್ಯ ವಲಯದ ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ನಡೆಸಿ, ಮರದ ನಾಟಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.

ವಿರಾಜಪೇಟೆ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಮ್‌ ಬಾಬು.ಎಂ. ಹಾಗೂ ವಿರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು ಇವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕೆ.ಎಂ.ದೇವಯ್ಯ, ವಿರಾಜಪೇಟೆ ವಲಯ ಅರಣ್ಯಾಧಿಕಾರಿಗಳಾದ ದೇಯಂಡ ಸಂಜಿತ್‌ ಸೋಮಯ್ಯ, ಮೋನಿ?ಾ ಎಂ.ಎಸ್‌.   ಶ್ರೀಶೈಲ ಮಲ್ಲಪ್ಪ ಮಾಲಿಗೌಡ್ರ, ಆನಂದ ಕೆ.ಆರ್‌, ಸಚಿನ ನಿಂಬಾಳ, ಎನ್‌.ಎನ್‌ ಅಕ್ಕಮ್ಮ, ಅನಿಲ್‌ ಸಿಟಿ, ಅರಣ್ಯ ರಕ್ಷಕರಾದ   ಆರುಣ ಸಿ, ಚಂದ್ರಶೇಖರ ಅಮರಗೋಳ, ನಾಗರಾಜ ರಡರಟ್ಟಿ, ಮಾಲತೇಶ ಬಡಿಗೇರ, ಟಿ.ಎನ್‌.ಪ್ರಶಾಂತ್‌ ಕುಮಾರ್‌, ವಾಹನ ಚಾಲಕರಾದ ಅಚ್ಚಯ್ಯ, ಆಶೋಕ ಹಾಗೂ ವಿರಾಜಪೇಟೆ ವಲಯ ಆರ್‌.ಆರ್‌.ಟಿ ತಂಡದ ಸಿಬ್ಬಂದಿಗಳಾದ ಮೊಣ್ಣಪ್ಪ ಹಾಗೂ ಪ್ರಕಾಶ್‌ ಪಾಲ್ಗೊಂಡಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next