Advertisement

ಅಕ್ರಮ ಮರ ಸಾಗಾಟ: ಐವರ ಬಂಧನ

10:52 AM Jul 01, 2019 | keerthan |

ಮಡಿಕೇರಿ: ಕೊಡಗು ಜಿಲ್ಲಾ ಬೆಟ್ಟಗೇರಿ ಗ್ರಾಮದಿಂದ ಅಕ್ರಮವಾಗಿ ಮರಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಅಪರಾಧ ಪತ್ತೆ ದಳ, 15 ಲ.ರೂ. ಮೌಲ್ಯದ ಸೊತ್ತು ಸಹಿತ ಐವರನ್ನು ಬಂಧಿಸಿದ್ದಾರೆ.

Advertisement

ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಗಸ್ತಿನಲ್ಲಿದ್ದ ಸಂದರ್ಭ ಮರ ಕಳವು ಮಾಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿ ಆಧಾರದಲ್ಲಿ ಬೆಟ್ಟಗೇರಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ತೋಟವೊಂದರಿಂದ ಹಲಸು ಮತ್ತು ಹೆಬ್ಬಲಸು ಮರದ 22 ನಾಟಾಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಆರೋಪಿಗಳು ಕಕ್ಕಬ್ಬೆ ಹಾಗೂ ಪುತ್ತೂರು ಮೂಲದವರಾಗಿದ್ದು, ಮರ ಸಾಗಾಟಕ್ಕೆ ಬಳಸಿದ ಲಾರಿ, ಬೆಂಗಾವಲು ನೀಡಿದ್ದ ಸ್ವಿಫ್ಟ್ ಮತ್ತು ಝೆನ್‌ ಕಾರು ಸಹಿತ 22 ಮರದ ನಾಟಾಗಳು ಹಾಗೂ 15 ಸಾ.ರೂ. ಅನ್ನು ವಶಕ್ಕೆ ಪಡೆಯಲಾಗಿದೆ. ಈ ಸೊತ್ತುಗಳ ಒಟ್ಟು ಮೌಲ್ಯ 15 ಲ. ರೂ. ಆಗಿದೆ ಎಂದು ಜಿಲ್ಲಾ ಅಪರಾಧ ಪತ್ತೆ ದಳ ತಿಳಿಸಿದೆ.

ಕಕ್ಕಬ್ಬೆ ಮೂಲದ ಅಶ್ರಫ್(31), ರಿಯಾಜ್‌(31), ಪಾಲೂರು ನಿವಾಸಿ ಅಬ್ದುಲ್‌ ರಹೀಂ(30), ಲಾರಿ ಚಾಲಕ ಪುತ್ತೂರಿನ ಹಾರಿಸ್‌(26) ಹಾಗೂ ಕ್ಲೀನರ್‌ ಪುತ್ತೂರಿನ ರಿಯಾಜ್‌(25) ಬಂಧಿತರು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಮಹೇಶ್‌, ಸಹಾಯಕ ಉಪ ನಿರೀಕ್ಷಕ ಹಮೀದ್‌, ಸಿಬಂದಿ ವರ್ಗದ ಯೋಗೇಶ್‌ ಕುಮಾರ್‌, ವಸಂತ, ವೆಂಕಟೇಶ್‌, ಚಾಲಕರಾದ ಶಶಿಕುಮಾರ್‌, ಗ್ರಾಮಾಂತರ ಎಸ್‌ಐ ಚೇತನ್‌, ಪ್ರೊಬೇಷನರಿ ಎಸ್‌ಐ ಶೇಷಾದ್ರಿ, ತೀರ್ಥಕುಮಾರ್‌, ಕಲ್ಲಪ್ಪ ಹಿಟ್ನಾಳ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next