Advertisement

ಅನಧಿಕೃತ ಹತ್ತಿಬೀಜ ದಾಸ್ತಾನು ಮೇಲೆ ದಾಳಿ: 2 ಕೋಟಿಗೂ ಅಧಿಕ ಮೌಲ್ಯದ ಹತ್ತಿ ಬೀಜ ಜಪ್ತಿ

12:05 AM Jun 01, 2020 | Hari Prasad |

ಯಾದಗಿರಿ: ಜಿಲ್ಲಾ ಕೇಂದ್ರ ಸೇರಿದಂತೆ ಗುರುಮಠಕಲ್ ವ್ಯಾಪ್ತಿಯಲ್ಲಿ ಅನಧಿಕೃತ ಹತ್ತಿ ಬೀಜ ದಾಸ್ತಾನು ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ 2.46 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಹೆಸರಿನ ಹತ್ತಿ ಬೀಜಗಳನ್ನು ಜಪ್ತಿ ಮಾಡಿದ್ದಾರೆ.

Advertisement

ಯಾದಗಿರಿ ನಗರ ಹೊರವಲಯದ ವರ್ಧಮಾನ ರೈಸ್ ಮಿಲ್ ಪಕ್ಕದಲ್ಲಿರುವ ಗೋದಾಮಿನಲ್ಲಿ ಅನಧಿಕೃತವಾಗಿ ಸಂಗ್ರಹಿಸಲಾದ ಬಿಡಿ ಹತ್ತಿ ಬಿತ್ತನೆ ಬೀಜದ ದಾಸ್ತಾನು, ನರ್ಮದ ಸಾಗರ ಅಗ್ರಿ ಸೀಡ್ಸ್ ಬಾಡಿಗೆ ಇರುವ ಗೋದಾಮಿನಲ್ಲಿ ಪತ್ತೆಯಾಗಿದ್ದು, ಅನಧಿಕೃತವಾಗಿ ವಿವಿಧ ಬ್ರ್ಯಾಂಡ್ ಗಳ ಹೆಸರಿನಲ್ಲಿ ಪ್ಯಾಕ್ ಮಾಡುತ್ತಿರುವುದು ದಾಳಿಯಲ್ಲಿ ಬಯಲಾಗಿದೆ.

ಅಂದಾಜು 345.95 ಕ್ವಿಂಟಲ್ ಅನಧಿಕೃತ ಹತ್ತಿ ಬೀಜ ದಾಸ್ತಾನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ಕೃಷಿ ಅಧಿಕಾರಿಗಳು ಗೋದಾಮನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಗುರುಮಠಕಲ್ ವ್ಯಾಪ್ತಿಯ ಕೇಶ್ವಾರ ಗ್ರಾಮದ ಮನೆಯಲ್ಲಿ ಸಂಗ್ರಹಿಸಿದ್ದ ಅಂದಾಜು 20 ಕ್ವಿಂಟಾಲ್ ಅನಧಿಕೃತ ಸಂಗ್ರಹಿಸಲಾದ ಹತ್ತಿ ಬೀಜದ ದಾಸ್ತಾನು ಮೇಲೆ ದಾಳಿ ನಡೆಸಲಾಗಿದೆ.

ಯಾದಗಿರಿ ಗ್ರಾಮೀಣ ಠಾಣೆ ಮತ್ತು ಗುರುಮಠಕಲ್ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಜಿಲ್ಲೆಯಲ್ಲಿ ಅನಧಿಕೃತ ಬಿತ್ತನೆ ಬೀಜ ಮಾರಾಟ ಮಾಡುವುದು ಅಥವಾ ದಾಸ್ತಾನು ಮಾಡುವುದು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡಲು ಜಂಟಿ ಕೃಷಿ ನಿರ್ದೇಶಕಿ ಆರ್ ದೇವಿಕಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next