Advertisement

ಅಕ್ರಮ ಕಲ್ಲು ಸಾಗಣೆ: 6 ಟ್ರ್ಯಾಕ್ಟರ್‌ ವಶ

08:09 AM Mar 18, 2021 | Team Udayavani |

ದೇವನಹಳ್ಳಿ: ತಾಲೂಕಿನ ಕೊಯಿರಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಟ್ರ್ಯಾಕ್ಟರ್‌ಗಳ ಮೂಲಕ ಸಾಗಾಣಿಕೆ ಮಾಡುವ ವೇಳೆಯಲ್ಲಿತಹಶೀಲ್ದಾರ್‌ ಅನಿಲ್‌ಕುಮಾರ್‌ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್‌ ಇಲಾಖೆ ಜಂಟಿಯಾಗಿ ದಾಳಿ ನಡೆಸಿ, ಆರು ಟ್ರ್ಯಾಕ್ಟರ್‌ ವಶಪಡಿಸಿಕೊಂಡಿದೆ.

Advertisement

ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯ ಹುಣಸೋಡು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಜಿಲೆಟಿನ್‌ ಸ್ಫೋಟದಿಂದ ಆದಂತಹ ದುರ್ಘ‌ಟನೆ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಗೊಂಡು, ಅಕ್ರಮವಾಗಿ ಕಲ್ಲು ಗಣಿಗಾರಿಕೆ, ಸಾಗಾಣಿಕೆ ಮೇಲೆ ಹದ್ದಿನ ಕಣ್ಣು ಇಡಲು ತಾಲೂಕು ಆಡಳಿತಗಳಿಗೆ ತಾಕೀತು ಮಾಡಿತ್ತು. ಅದರಂತೆ ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ತೊಡಗಿದೆ. ಆದರೂ, ರಾತ್ರಿ ವೇಳೆ, ಬೆಳಗಿನ ಜಾವ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇದೆ. ರಾತ್ರಿ ವೇಳೆ ಕ್ರಷರ್‌ಗಳ ಶಬ್ಧಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ವೃದ್ಧರು, ಶಾಲಾ ಓದಿಕೊಳ್ಳಲು ಕಷ್ಟವಾಗುತ್ತಿದೆ. ಅನಾರೋಗ್ಯ ಪೀಡಿತರು ರಾತ್ರಿ ವೇಳೆ ನಿದ್ರೆ ಭಂಗವಾಗಿ ನರಳವಂತಾಗಿದೆ. ರಾತ್ರಿ ಸಂಚರಿಸುವ ಕಾಡು ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗುತ್ತಿದೆ.

ಅಕ್ರಮವಾಗಿ ಗ್ರಾನೈಟ್‌ ವಾಹನಗಳು, ಕಲ್ಲು ದಿಮ್ಮೆಗಳ ಸರಬರಾಜು ವಾಹನಗಳು, ಕ್ರಷರ್‌ಗಳಿಗೆ ಕಚ್ಚಾ ಸಾಮಗ್ರಿ ಸಾಗಣೆ ಮಾಡುವ ಲಾರಿಗಳ ಓಡಾಟದಿಂದಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಕ್ರಮಕೈಗೊಂಡಿಲ್ಲ: ಅಧಿಕಾರಿಗಳು ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳ ಟಾಸ್ಕ್ ಪೋರ್ಸ್‌ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಇದರ ಬಗ್ಗೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಸಾಮಾಜಿಕ ಕಾರ್ಯಕರ್ತ ಕೊಯಿರಾ ಚಿಕ್ಕೇಗೌಡ ಆರೋಪಿಸಿದ್ದಾರೆ.

ಮಾಲಿಕರಿಗೆ ಎಚ್ಚರಿಕೆ: ಕೊಯಿರಾ ಗ್ರಾಮದ ಸಮೀಪದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮನೋಇಚ್ಛೆ ನಡೆಯುತ್ತಿದೆ. ಯಾವುದೇ ಪರವಾನಗಿ ಇಲ್ಲದೆ ರಾಜಾರೋಷವಾಗಿ ಫ್ಯಾಕ್ಟರಿಗಳಿಗೆ ಕಲ್ಲು ಸಾಗಾಣಿಕೆ ಸಾಮಾನ್ಯವಾಗಿ ನಡೆಯುತ್ತಿದೆ. ಇದರಿಂದ ಎಚ್ಚೆತ್ತುಗೊಂಡ ಅಧಿಕಾರಿಗಳು, ದಾಳಿಗೆ ಮುಂದಾಗಿದ್ದಾರೆ. ಟ್ರ್ಯಾಕ್ಟರ್‌ ವಶಕ್ಕೆ ಪಡೆದ ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ತಹಶೀಲ್ದಾರ್‌ ಅನಿಲ್‌ ಕುಮಾರ್‌ ಜೊತೆಗೂಡಿ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ, ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಅಕ್ರಮವಾಗಿ ಕಲ್ಲು ಸಾಗಾಣಿಕೆ ನಡೆಸುತ್ತಿರುವವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಪರವಾನಗಿ ಇಲ್ಲದೆನಡೆಸುತ್ತಿರುವ ಕ್ರಷರ್‌ಗಳ ವಿರುದ್ಧ ಕ್ರಮಜರುಗಿಸಲಾಗುತ್ತದೆ. ಬುಧವಾರ ಬೆಳಗ್ಗೆ ದಾಳಿ ಮಾಡಲಾಗಿದೆ. 6 ಟ್ರ್ಯಾಕ್ಟರ್‌ಗಳನ್ನು ವಶಕ್ಕೆಪಡೆಯಲಾಗಿದೆ. ಗಣಿಗಾರಿಕೆ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸೀಸ್‌ಆಗಿರುವ ವಾಹನಗಳ ಮಾಲಿಕರಿಗೆ ಪೆನಾಲ್ಟಿ ಹೇರಲಾಗಿದೆ. ಟಾಸ್ಕ್ಫೋರ್ಸ್‌ಕಮಿಟಿಯೊಂದಿಗೆ ಗಣಿ ಮತ್ತು ಭೂ ವಿಜ್ಞಾನಇಲಾಖೆ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಿ, ಸೂಕ್ತ ಸ್ಥಳ ಗುರುತಿಸುವಂತೆ ಸೂಚಿಸಲಾಗಿದೆ. -ಅನಿಲ್‌ಕುಮಾರ್‌ ಅರೋಲಿಕರ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next