Advertisement
ತಮಿಳುನಾಡಿನ ಸವಾಪೇಟ ಸೇಲಂನ ವಿಜಯಕುಮಾರ ಆತ್ಮಾರಾಮ ಶಿಂಧೆ ಹಾಗೂ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕಟಾವ್ ತಾಲೂಕಿನ ಬೆಳೆವಾಡಿಯ ರಿಯಾಜ್ ಶಾಕೀರಹುಸೇನ ಮುಲ್ಲಾನಿ ಎಂಬವರನ್ನು ಬಂಧಿಸಿರುವ ಪೊಲೀಸರು ಅವರಿಂದ ಡಸ್ಟರ್ ಕಾರು, 300 ಕೆ.ಜಿ.ಬೆಳ್ಳಿ ಗಟ್ಟಿ, ಮೂರು ಲಕ್ಷ ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ಸೇಲಂಗೆ ಡಸ್ಟರ್ ಕಾರಿನಲ್ಲಿ ಅಕ್ರಮವಾಗಿ ಬೆಳ್ಳಿ ಗಟ್ಟಿ ಹಾಗೂ ಆಭರಣಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಯಮಕನಮರಡಿ ಹಾಗೂ ಡಿಸಿಐಬಿ ಘಟಕ ಪೊಲೀಸರು ಈ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಈ ಅಕ್ರಮ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭಿಸಿದೆ. ಡಿಸಿಐಬಿ ಘಟಕ ಇನ್ ಸ್ಪೆಕ್ಟರ್ ನಿಂಗನಗೌಡ ಪಾಟೀಲ, ಯಮಕನಮರಡಿಯ ರಮೇಶ ಪಾಟೀಲ, ಎಎಸ್ ಐ ಡಿ.ಕೆ. ಪಾಟೀಲ, ಟಿ.ಕೆ. ಕೊಳಚಿ, ಎಂ.ಜಿ. ಮುಜಾವರ, ಎಸ್.ಎಂ. ಮಂಗಣ್ಣವರ, ಎಂ.ಆರ್. ಪಠಾಣ, ವಿ.ಆರ್. ನಾಯಕ, ಆರ್.ಬಿ.ಕಲ್ಲೋಳ್ಳಿ ಅವರ ತಂಡ ಈ ಯಶಸ್ವಿ ದಾಳಿಯನ್ನು ನಡೆಸಿದೆ.