Advertisement

ಹುಣಸೂರು: ಗಂಧದ ಮರದ ತುಂಡುಗಳ ಅಕ್ರಮ ಸಾಗಾಟ; ಓರ್ವನ ಬಂಧನ; ನಾಲ್ವರು ಪರಾರಿ

09:58 PM Sep 17, 2020 | mahesh |

ಹುಣಸೂರು: ಅಕ್ರಮವಾಗಿ ಗಂಧದ ಮರದ ತುಂಡುಗಳ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಓರ್ವನನ್ನು ಬಂಧಿಸಿ ಗಂಧದ ತುಂಡು ವಶಕ್ಕೆ ಪಡೆದುಕೊಂಡ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಬೀರತಮ್ಮನಹಳ್ಳಿ- ಪಂಚವಳ್ಳಿ ನಡೆದಿದೆ.

Advertisement

ಬಂಧಿತ ಆರೋಪಿ ಸ್ವಾಮಿ ಎಂದು ತಿಳಿದು ಬಂದಿದ್ದು, ಈತನಿಂದ 12 ಕೆಜಿಯಷ್ಟು ಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು. ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ. ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಗುರುವಾರ ಅರಣ್ಯ ಸಿಬ್ಬಂಧಿಗಳು ಗಸ್ತಿನಲ್ಲಿದ್ದ ವೇಳೆ ಗೋಣಿ ಚೀಲದಲ್ಲಿ ಸುತ್ತಿದ್ದ ಗಂಧದ ತುಂಡುಗಳನ್ನು ಸಾಗಿಸುತ್ತಿರುವ ವಾಸನೆಯ ಜಾಡು ಹಿಡಿದು ಆರೋಪಿಗಳನ್ನು ಬೆನ್ನತ್ತಿದ ವೇಳೆ ಸ್ವಾಮಿ ಮಾಲು ಸಮೇತ ಸಿಕ್ಕಿ ಬಿದ್ದಿದ್ದಾನೆ. ಉಳಿದ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಎ.ಸಿ.ಎಫ್ ಸತೀಶ್ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next