ಮಡಿಕೇರಿ : ಕುಶಾಲನಗರ ವ್ಯಾಪ್ತಿಯಲ್ಲಿ ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಲಕ್ಷಾಂತರ ಮೌಲ್ಯದ ಮಾಲು ಸಹಿತ ಎರಡು ವಾಹನಗಳು ಮತ್ತು ಇಬ್ಬರು ಆರೋಪಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕುಶಾಲನಗರ ಸಮೀಪದ ವಾಲ್ನೂರು ತ್ಯಾಗತ್ತೂರು ಬಳಿ ಮಾರುತಿ ಸುಜುಕಿ ಕಾರಿನಲ್ಲಿ ಬೀಟೆ ಮರದ 6 ನಾಟಗಳನ್ನು ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬಂದಿಗಳು 5 ಲಕ್ಷ ಮೌಲ್ಯದ ವಾಹನ ಮತ್ತು ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಲ್ನೂರು ತ್ಯಾಗತ್ತೂರು ಗ್ರಾಮದ ಅಬ್ದುಲ್ ನಸೀರ್ (37), ಅಬ್ದುಲ್ ಮನಾಫ್ (30) ಎಂಬವರನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ.
ಮಡಿಕೇರಿ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಉಪ ವಲಯ ಅರಣ್ಯಾಧಿಕಾರಿ ಕೆ.ಎಲ್.ವಿಲಾಸ್ ಮತ ಕೊಪ್ಪ ಬಳಿ ಅರಣ್ಯ ತನಿಖಾ ಠಾಣೆ ಸಮೀಪ ಮಾರುತಿ ಓಮ್ನಿಯೊಂದನ್ನು ತಪಾಸಣೆಗೆ ತಡೆದು ನಿಲ್ಲಿಸಲು ಸೂಚಿಸಿದರೂ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿ, ಸಿಬಂದಿಗಳು ವಾಹನವನ್ನು ಬೆನ್ನುತ್ತಿ ಆರೋಪಿಗಳನ್ನು ಕೂಡಲೆ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕುಶಾಲ ನಗರಟ್ಟಿ ಬೈಲುಕೊಪ್ಪ ಬಳಿ ವಶಪ ಡಿಸಿಕೊಂಡಿದ್ದಾರೆ. ಕಾರನ್ನು ಪರಿಶೀಲಿಸಿದಾಗ ಬೀಟೆ ಮರದ 8 ನಾಟಾಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮಾಲು ಮತ್ತು ವಾಹನದ ಮೌಲ್ಯ ಅಂದಾಜು ರೂ3 ಲಕ್ಷ ಎಂದು ಅಂದಾಜಿಸಲಾಗಿದೆ.