Advertisement
ಅಕ್ರಮ ಮರಳುಗಾರಿಕೆ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಪ್ರಸನ್ನ ಪಕ್ಕಳ ಮತ್ತು ಸಿಬಂದಿ ಮರಳು ಅಡ್ಡೆಯಲ್ಲಿ ಮರಳು ತೆಗೆದಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಮಹಜರು ನಡೆಸಿದರು.
ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗೆಗೆ ಕುರುಹುಗಳು ಕಂಡು ಬರುತ್ತಿವೆ. ಅದಾಗ್ಯೂ ನದಿ ಬದಿಯಲ್ಲಿ ರಸ್ತೆ ಮಾಡಿಕೊಂಡಿದ್ದಾರೆ. ಈಗಾಗಲೇ ಬಹಳಷ್ಟು ಪ್ರಮಾಣದಲ್ಲಿ ಮರಳು ಸಾಗಿಸಲಾಗಿದೆ. ಈ ಬಗ್ಗೆ ಮೇಲಧಿಕಾರಿಗೆ ಸಮಗ್ರ ವರದಿ ಸಲ್ಲಿಸುತ್ತೇನೆ ಮತ್ತು ಇಲ್ಲಿನ ಬಗ್ಗೆ ನಿಗಾ ಇಡಲಾಗುವುದು. ಹಠಾತ್ ದಾಳಿ ನಡೆಸಿ ಕಾರ್ಮಿಕರು ಮತ್ತು ವಾಹನಗಳನ್ನು ಪತ್ತೆ ಹಚ್ಚಲಾಗುವುದು ಎಂದು ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಪ್ರಸನ್ನ ಪಕ್ಕಳ ಅವರು ತಿಳಿಸಿದ್ದಾರೆ.