Advertisement

ನಿಲ್ಲದ ಅಕ್ರಮ ಅಕ್ರಮ ಮರಳು ಮರಳು ದಂಧೆ

12:01 PM Jun 14, 2019 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಬರದ ಭೀಕರತೆ ಹೆಚ್ಚಾಗುತ್ತಿದೆ. ನೀರಿಗಾಗಿ ಎಲ್ಲೆಡೆ ಹಾಹಾಕಾರ ಸೃಷ್ಟಿಯಾಗಿದೆ. ಆದರೆ ಜಿಲ್ಲೆಯಲ್ಲಿ ಒಂದೆಡೆ ಜಲ ಕ್ರಾಂತಿ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಅಕ್ರಮ ಮರಳು ದಂಧೆಯ ಜಾಲ ವ್ಯಾಪಕವಾಗಿದ್ದು, ಅಧಿಕಾರಿಗಳು ಸೇರಿ ಪೊಲೀಸರಿಗೂ ಕ್ಯಾರೇ ಎನ್ನದಂತ ಬೆಳೆದು ನಿಂತಿದೆ.

Advertisement

ಹೌದು. ಜಿಲ್ಲೆಯ ರೈತ ಸಮೂಹ ಮಳೆಗಾಗಿ ನಿತ್ಯವೂ ದೇವರಲ್ಲಿ ಮೊರೆಯಿಡುತ್ತಿದೆ. ಎಲ್ಲೆಡೆ ಜಪ, ಹೋಮ, ಹವನಗಳು ನಡೆದಿವೆ. ಪೂಜೆ, ಪುನಸ್ಕಾರ ಮಾಡಿದರೂ ಅಂತರ್ಜಲ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಮನುಕುಲವೇ ಆತಂಕಕ್ಕೆ ಒಳಗಾವುಂತ ಸ್ಥಿತಿ ಎದುರಾಗಿದೆ.

ಇದಕ್ಕೆ ಪ್ರಮುಖ ಕಾರಣ ಮರಳು ದಂಧೆ, ಭೂಮಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಮರಳನ್ನು ಅಕ್ರಮವಾಗಿ ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಮರಳು ದಂಧೆಗೆ ಮಿತಿಯೇ ಇಲ್ಲದಂತ ಸ್ಥಿತಿ ಬಂದಿದೆ. ಹಳ್ಳ, ನದಿ ಪಾತ್ರದ ಸ್ಥಳಗಳ ಸುತ್ತಲೂ ಅವಲೋಕನ ಮಾಡಿದರೆ ಸಾಲು ಕಂದಕದಂತೆ ದೊಡ್ಡ ಗುಂಡಿ ತೋಡಿ ಮರಳು ಸಾಗಾಟ ಮಾಡುತ್ತಿರುವುದು ಗೋಚರಿಸುತ್ತಿದೆ.

ಮರಳು ನೀತಿಯ ಪ್ರಕಾರ ಭೂಮಿಯ ಹಳ್ಳದ ತಟದಲ್ಲಿ ಒಂದು ಮೀಟರ್‌ ಆಳದಷ್ಟು ಮಾತ್ರ ಮರಳು ತೆಗೆಯಬೇಕು. ಆದರೆ ಜಿಲ್ಲೆಯಲ್ಲಿ ಆ ನಿಯಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕೊಪ್ಪಳ ತಾಲೂಕಿನ ಹಳೇ ಗೊಂಡಬಾಳ, ಹೊಸ ಗೊಂಡಬಾಳ ಸಮೀಪದ ಬೂದಿಹಾಳ ಬ್ರಿಡ್ಜ್ ಬಳಿ ಅಕ್ರಮ ಮರಳು ದಂಧೆ ನಿರಾಂತಕವಾಗಿ ನಡೆದಿದೆ. ಇಲ್ಲಿ ಯಾರ ಭಯವಿಲ್ಲ. ಹಳ್ಳದ ಪಕ್ಕದ ಜಮೀನಿನಲ್ಲೇ ಹತ್ತಾರು ಕಡೆ ಕಂದಕದಂತೆ ತಗ್ಗು ಕಾಣಿಸುತ್ತವೆ. ಮರಳಿನ ದಂಧೆ ಬಗ್ಗೆ ಸುತ್ತಲಿನ ಜನತೆ ಬೇಸತ್ತು ಹೋಗಿದ್ದಾರೆ. ಇದರಿಂದ ಹಳ್ಳದ ಸುತ್ತಲಿನ ಪಂಪ್‌ಸೆಟ್ ನೀರು ಬತ್ತಿ ಹೋಗುತ್ತಿವೆ ಎಂದು ಗೋಗರೆಯುತ್ತಿದ್ದಾರೆ.

ಹಳೇ ಗೊಂಡಬಾಳ ಹಾಗೂ ಬೂದಿಹಾಳ ಬ್ರಿಡ್ಜ್ ಬಳಿಯಂತೂ ಮರಳು ದಂಧೆ ವಿಪರೀತವಾಗಿದೆ. ಅಚ್ಚರಿ ಎಂದರೆ, ಸಾಮಾನ್ಯ ಜನತೆಗೆ ಮನೆ ನಿರ್ಮಿಸಿಕೊಳ್ಳಬೇಕೆಂದರೆ ಸರ್ಕಾರದಿಂದ ಪರ್ಮಿಟ್ ಮರಳು ಸಿಗುತ್ತಿಲ್ಲ. ಪರ್ಮಿಟ್ಗಾಗಿ ನಿತ್ಯ ಅಲೆದಾಡುವಂತ ಸ್ಥಿತಿ ಬಂದಿದೆ. ಆದರೆ ಅದೇ ಅಕ್ರಮ ಮರಳು ಎಂದರೆ ಕ್ಷಣಾರ್ಧದಲ್ಲಿ ಜನರ ಮನೆ ಮುಂದೆ ಲೋಡ್‌ ಗಟ್ಟಲೆ ಬಂದು ಬೀಳುತ್ತಿದೆ. ಇಲ್ಲಿ ಯಾವ ಅಧಿಕಾರಿಗಳ ಆಟವೂ ನಡೆಯುತ್ತಿಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ ಜನತೆ. ಜನಪ್ರತಿನಿಧಿಗಳ ಸಾಥ್‌ ಇಲ್ಲದೇ ಮರಳು ದಂಧೆ ನಡೆಯಲ್ಲ. ಅವರ ಬೆಂಬಲಿಗರದ್ದೆ ಆರ್ಭಟ ಜೋರಾಗಿದೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಕೆಳ ಮಟ್ಟದಿಂದ ಮೇಲ್ಮಟ್ಟದವರೆಗೂ ಈ ಜಾಲ ವ್ಯಾಪಿಸಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

Advertisement

ಮಲಗಿದ್ದಾರೆಯೇ ಅಧಿಕಾರಿಗಳು: ಪೊಲೀಸ್‌ ಇಲಾಖೆಯಂತೂ ಅಕ್ರಮ ಮರಳು ದಂಧೆಯ ಮೇಲೆ ನಿಗಾ ಇಡುವುದೇ ಕಡಿಮೆ ಮಾಡುತ್ತಿದೆ. ರಸ್ತೆಗಳಲ್ಲಿ ಸಿಗುವ ವಾಹನಗಳನ್ನು ಠಾಣೆಗೆ ಕರೆ ತಂದು ವಾಪಾಸ್‌ ಕಳಿಸಲಾಗುತ್ತಿದೆ. ಆದರೆ ಮೂಲ ದಂಧೆ ನಡೆಯುವ ತಾಣಗಳನ್ನೊಮ್ಮೆ ಕಣ್ತೆರೆದ ನೋಡುತ್ತಿಲ್ಲ. ಇನ್ನೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಂತೂ ಇನ್ನೂ ಎಚ್ಚುತ್ತುಕೊಂಡಿಲ್ಲ. ಅವರು ದಾಳಿ ಮಾಡೋದು ತುಂಬ ವಿರಳ ಎನ್ನುವ ಮಾತು ಕೇಳಿ ಬಂದಿದ್ದರೆ, ಇನ್ನು ಹಲವು ಅಧಿಕಾರಿಗಳು ಎಲ್ಲ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next