Advertisement

Illegal sand mining: ಪೊಲೀಸ್‌ ದಾಳಿ;1 ಕೋ.ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳು ವಶಕ್ಕೆ

10:04 PM Aug 19, 2023 | Team Udayavani |

ಮಂಗಳೂರು: ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಇಡ್ಯಾ ಬಳಿ ಪಲ್ಗುಣಿ ನದಿತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮತ್ತು ಸಾಗಾಟವನ್ನು ಪತ್ತೆ ಹಚ್ಚಿರುವ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಧನ್ಯಾ ಎನ್‌. ನಾಯಕ್‌ ನೇತೃತ್ವದ ಪೊಲೀಸ್‌ ತಂಡ ಮರಳು ಸಾಗಾಟಕ್ಕೆ ಬಳಸಿದ್ದ 10 ಟಿಪ್ಪರ್‌, ಡೋಜರ್‌ ಮತ್ತು ಜೆಸಿಬಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಸುಮಾರು ಒಂದು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಉಳಾಯಿಬೆಟ್ಟಿನ ಇಡ್ಯಾದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಎಸಿಪಿ ನೇತೃತ್ವದ ತಂಡದೊಂದಿಗೆ ಕಂಕನಾಡಿ ಗ್ರಾಮಾಂತರ ಪೊಲೀಸರು ಮತ್ತು ಸ್ಥಳೀಯ ಪಂಚಾಯತ್‌ ಅಧಿಕಾರಿ ದಾಳಿ ನಡೆಸಿದಾಗ ಇಲಾಖಾ ವಾಹನ ಬರುತ್ತಿದ್ದಂತೆ ಲಾರಿಗಳಲ್ಲಿದ್ದ ಚಾಲಕರು ಮತ್ತು ಕಾರ್ಮಿಕರು ಪಕ್ಕದ ತೋಟದ ಮೂಲಕ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಡೋಜರ್‌ ಮತ್ತು ಜೆಸಿಬಿ ಮೂಲಕ ಮರಳು ತುಂಬಿಸಿದ್ದ ಎರಡು ಟಿಪ್ಪರ್‌ ಲಾರಿ ಮತ್ತು ಎಂಟು ಖಾಲಿ ಟಿಪ್ಪರ್‌ ಗಳು, ಒಂದು ಜೆಸಿಬಿ, 1 ಡೋಜರ್‌ ಮತ್ತು ದಾಸ್ತನು ಇರಿಸಲಾಗಿದ್ದ ಮರಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌ .ಜೈನ್‌ ಮಾರ್ಗದರ್ಶನದಲ್ಲಿ ಉಪ ಪೊಲೀಸ್‌ ಆಯುಕ್ತರಾದ ಅಂಶು ಕುಮಾರ್‌, ದಿನೇಶ್‌ ಕುಮಾರ್‌ ಅವರ ನಿರ್ದೇಶನದಂತೆ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಧನ್ಯಾ ಎನ್‌. ನಾಯಕ್‌ ತಂಡ ದಾಳಿಯಲ್ಲಿ ಭಾಗವಹಿಸಿತ್ತು. ಕಂಕನಾಡಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next