Advertisement

Illegal Rice Transportation: ಲಕ್ಷಾಂತರ ರೂ. ಮೌಲ್ಯದ ಅಕ್ಕಿ, ಲಾರಿ ಪೊಲೀಸರ ವಶಕ್ಕೆ

06:20 PM Sep 28, 2023 | Shreeram Nayak |

ಇಂಡಿ: ಅಕ್ರಮವಾಗಿ ಲಾರಿಯಲ್ಲಿ ಅಕ್ಕಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಜಳಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬುಧವಾರ ನಡೆದಿದೆ.

Advertisement

ಮಹಾರಾಷ್ಟ್ರದ ಠಾಕಳಿ ಯ ಸಂಜಯ್ ಸಲಗರ್ ಸೋಲಾಪುರದ ಸಾಧಿಕ್ ಕಲ್ಬುರ್ಗಿ ಕರಡದ ವೈಭವ್ ಮಾನೆ ಬಂಧಿತ ಆರೋಪಿಗಳು.

ಸೋಲಾಪುರದ ಗೊಡವಾನ್ ನಿಂದ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ದಾಳಿಗೈದು 5,72,470 ಮೌಲ್ಯದ 24,890 ಕೆಜಿ ಅಕ್ಕಿ ಹಾಗೂ ಎರಡು ಲಕ್ಷ ರೂಪಾಯಿ ಮೌಲ್ಯದ ಲಾರಿ ವಶ ಪಡೆದುಕೊಂಡಿದ್ದಾರೆ.

ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಆಹಾರ ನಿರೀಕ್ಷಕ ಪರಮಾನಂದ ಹೂಗಾರ್ ಪ್ರಕರಣ ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಪರಮಾನಂದ ಹೂಗಾರ್ ಮತ್ತು ಜಳಕಿ ಠಾಣಾ ಪಿಎಸ್ಐ ಎಸ್ಬಿ ಪಾಟೀಲ್ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next