Advertisement

ಪತ್ನಿ ಜತೆ ಅಕ್ರಮ ಸಂಬಂಧ; ತಮ್ಮನನ್ನೇ ಕೊಂದ

02:12 AM Feb 15, 2019 | |

ಸಿಂದಗಿ: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನು ಅಣ್ಣನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

Advertisement

ಗ್ರಾಮದ ಸಿದ್ದರಾಮ ಶಿವಪ್ಪ ಬಳಬಟ್ಟಿ (32) ಕೊಲೆಯಾದ ವ್ಯಕ್ತಿ. ಮೃತ ಸಿದ್ದರಾಮ ಬಳಬಟ್ಟಿ ತನ್ನ ಅಣ್ಣನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮನೆಯಲ್ಲಿ ಸಿದ್ದರಾಮ ಸ್ನಾನ ಮಾಡುವಾಗ ಅಣ್ಣ ನಿಂಗಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next