Advertisement

ಮೈಮುಲ್‌ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ

08:47 AM May 13, 2020 | Lakshmi GovindaRaj |

ಮೈಸೂರು: ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ, ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಯಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ  ಮಾತನಾಡಿ, ಮೈ ಸೂರು ಜಿಲ್ಲಾ ಹಾಲು ಒಕ್ಕೂಟದ ಸಭೆ ಯಲ್ಲಿ ಅಕ್ರಮಕ್ಕೆ ಅನುಮತಿ ನೀಡಿ, ಹೆಚ್ಚು ವರಿ ಹುದ್ದೆ ನೇಮಕಕ್ಕೆ ತೀರ್ಮಾನಿಸಲಾಗಿದೆ. ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಪ್ರಸ್ತುತ 168 ಹುದ್ದೆ  ನೇಮಕಾತಿಗೆ ಆದೇಶವಿದೆ.

Advertisement

ಆದರೆ, ಹೆಚ್ಚುವರಿ 25 ಹುದ್ದೆಯನ್ನು ನೇರ ನೇಮಕಾತಿ ಮಾಡಿ  ಕೊಳ್ಳುತ್ತಿದ್ದಾರೆ. 18 ಸಾವಿರ ಜನ ಪರೀಕ್ಷೆ ಎದು ರಿಸಿ  ದ್ದರು. ಈ ಪೈಕಿ 168, 25 ಮಂದಿ ಪಾಸಾ ಗಿ ದ್ದಾರೆ. ಪರೀಕ್ಷೆ ನಡೆಸಿದ್ದ ಏಜೆನ್ಸಿ ಮೇಲೆ ಆರೋಪ ಕೇಳಿಬಂದಿದೆ. ಯಾರೇ ನಾಯಕ ರಿದ್ದರೂ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದರು. ಮೈಮುಲ್‌ನಲ್ಲಿ ಅವ್ಯವಹಾರಗಳು ನಡೆ  ದಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಎಂಗೆ ಪತ್ರ ಬರೆದಿದ್ದೇನೆ.

168 ಹುದ್ದೆಗಳ ನೇಮ ಕಾತಿ  ವೇಳೆ ಹೆಚ್ಚುವರಿಯಾಗಿ 25 ಹುದ್ದೆ  ಗಳನ್ನು ಸೃಷ್ಟಿಸಿರುವುದು ನಿಯಮ ಉಲ್ಲಂಘನೆ ಯಾಗಿದೆ. ಈ ಬಗ್ಗೆ ಸಚಿವರ ಸ್ಪಷ್ಟನೆಯೂ ಪೂರಕವಾಗಿಲ್ಲ. ಇದೆಲ್ಲವೂ ಒಂದು ರೀತಿಯ ಮ್ಯಾಚ್‌ ಫಿಕ್ಸಿಂಗ್‌ ರೀತಿಯ ಅಕ್ರಮವಾಗಿದ್ದು, ಅಧ್ಯಕ್ಷರು, ನಿರ್ದೇಶಕರ ನಡುವೆ ಫಿಕ್ಸಿಂಗ್‌ ಆಗಿದೆ. ಅದರನ್ವಯ ಅಕ್ರಮ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಿದರು.

ದಾಖಲೆ ಇದೆ: ನನ್ನ ಕ್ಷೇತ್ರದ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರು ನೀಡಿದ ಸುಳಿವಿನ  ಮೇರೆಗೆ ಈ ವಿಷಯ ಬೆಳ ಕಿಗೆ ಬಂದಿದೆ. ಅಕ್ರಮ ನೇಮಕಕ್ಕೆ ಅಂದಾಜು 35 ರಿಂದ 40 ಕೋಟಿ ಹಣ ವಸೂಲಿ ಮಾಡಲಾ  ಗಿದ್ದು, ಅರ್ಜಿ ಹಾಕಿದ ವಿದ್ಯಾರ್ಥಿಗಳೊಂದಿಗೆ ಮಾತ ನಾಡಿರುವ ಆಡಿಯೋ ದಾಖಲೆ ಇದೆ. ಕೆಲಸಕ್ಕೆ ಅರ್ಜಿ ಹಾಕಿ  ರುವ ಇಬ್ಬರು ಮಹಿಳೆಯರೊಂ ದಿಗೆ ಮಾತ ನಾಡಿ ಇಂತಿಷ್ಟು ಹಣ ಕೊಟ್ಟರೆ ನೇಮಕ ಮಾಡುವುದಾಗಿ ಹೇಳಿದ್ದು,

ಇದಕ್ಕೆ ಪ್ರತಿಭಾನ್ವಿತೆ ಯಾದ ಬಾಣಂತಿಯೊಬ್ಬಳು ತನ್ನ ಬಳಿ ಅಷ್ಟು ಹಣ ಇಲ್ಲ ಎಂದು ಹೇಳಿ ಕೊಂಡಿ  ದ್ದಾಳೆ. ಕೊನೆಗೆ  ಆಕೆಗೆ ನೌಕರಿ ಸಿಕ್ಕಿಲ್ಲ. ಇದರಿಂದ ಖನ್ನತೆಗೂ ಒಳಗಾಗಿ ಆಸ್ಪತ್ರೆಗೆ ದಾಖ ಲಾಗಿ ದ್ದಾರೆ ಎಂದು ಹೇಳಿದರು. ಆಡಳಿತ ಮಂಡಳಿ ನೇಮಿಸಿರುವ ಮಂಗಳೂರಿನ ನೇಮ  ಕಾತಿ ಏಜೆನ್ಸಿ ಚಾ.ನಗರ ಒಕ್ಕೂಟದಲ್ಲಿ ನಡೆಸಿರುವ ನೇಮಕಾತಿ ಪ್ರಕ್ರಿಯೆ  ಅಕ್ರಮವೆಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ದೆ.

Advertisement

ಹೀಗಿರುವಾಗ ಅವರಿಗೆ ಮೈಮುಲ್‌ ನೇಮಕಾತಿ ಪ್ರಕ್ರಿಯೆ ವಹಿಸಿದ್ದು, ಅವರಿಂದ ನ್ಯಾಯ ಸಮ್ಮತ ನೇಮಕ ಪ್ರಕ್ರಿಯೆ ನಿರೀಕ್ಷಿಸಲು ಸಾಧ್ಯವೇ? ಒಟ್ಟಾರೆ  ಹೆಚ್ಚುವರಿ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಸಂಪೂರ್ಣ ತನಿಖೆ ಆಗಬೇಕು. ಮುಂದಿನ ದಿನಗಳಲ್ಲಿ ಇದೇ ವಿಚಾರದಲ್ಲಿ ಯಾರು ಎಷ್ಟೆಷ್ಟು ಹಣ ಪಡೆ ದ್ದಾರೆಂಬ ಆಡಿಯೋವನ್ನು 2ನೇ ಎಪಿಸೋಡ್‌ನಲ್ಲಿ ತಿಳಿಸುವುದಾಗಿ ಹೇಳಿದರು.

ರೈತರೊಂದಿಗೆ ಚೆಲ್ಲಾಟ: ಮೈಸೂರು ಜಿಲ್ಲಾ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿ ಮಾಡುವ ವಿಚಾರದಲ್ಲೂ ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ. ರೈತರಿಂದ ಖರೀದಿ ಮಾಡುತ್ತಿರುವ ಹಾಲಿನ ದರ ಕಡಿತ ಮಾಡಿರು ವುದು  ಸರಿಯಾದ ಕ್ರಮವಲ್ಲ. ಇದರಿಂದ ಲಕ್ಷಾಂತರ ರೈತರಿಗೆ ನಷ್ಟವಾಗಲಿದೆ. ಡೇರಿ ಆರ್ಥಿಕವಾಗಿ ಲಾಭದಲ್ಲಿ ನಡೆಯುತ್ತಿರುವುದರಿಂದಲೇ ಮೆಗಾ ಡೇರಿ ಆರಂಭವಾಗಿದೆ. ಹಾಲಿನ ದರವನ್ನು 4.50 ಪೈಸೆ ಕಡಿಮೆ ಮಾಡಿ ರೈತರಿಗೆ ನಷ್ಟ  ಮಾಡುವುದು ಸರಿಯಲ್ಲ ಎಂದು ಸಾ.ರಾ.ಮಹೇಶ್‌ ಹೇಳಿದರು.

ಹುಣಸೂರನ್ನು ಜಿಲ್ಲೆ ಮಾಡಿ ಎಂದು ಹೇಳಲು ವಿಶ್ವನಾಥ್‌ ಯಾರು. ನಾನು ಶಾಸನ ಸಭೆ ಪ್ರತಿನಿಧಿಯಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ. ಹೊಸ ಜಿಲ್ಲೆ ಮಾಡಲು ಹೊರಟಿರುವ ವಿಶ್ವನಾಥ್‌ ಯಾರು?
 -ಸಾ.ರಾ.ಮಹೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next