ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಚಿತ್ರಪಾಡಿಯ ದೊಡ್ಡ ಹೊಳೆಗೆ ಇಲ್ಲಿನ ಸ್ಥಳೀಯ ವಸತಿ ಸಂಕೀರ್ಣಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಬಿಡುತ್ತಿದ್ದು ಇದರಿಂದ ಹೊಳೆ ನೀರು ಸಂಪೂರ್ಣ ಕಲುಷಿತವಾಗಿ ಕೃಷಿ ನಡೆಸಲು ಅಸಾಧ್ಯವಾಗಿರುವ ಕುರಿತು ಗ್ರಾಮಸ್ಥರು ಪ.ಪಂ.ಗೆ ದೂರು ನೀಡಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ನೂರಾರು ಸಂಖ್ಯೆಯ ಗ್ರಾಮಸ್ಥರು ಅ.5ರಂದು ಪ.ಪಂ.ಗೆ ತೆರಳಿ ಅಕ್ರೋಶ ವ್ಯಕ್ತಪಡಿಸಿದರು. ಆಗ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಪ.ಪಂ. ಮುಖ್ಯಸ್ಥರು ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಸಂಪರ್ಕವನ್ನು ತೆರವುಗೊಳಿಸಿದರು.
ಗ್ರಾಮಸ್ಥರ ಆಕ್ರೋಶಕೃಷಿ
ಈ ಸಂದರ್ಭ ಪ.ಪಂ. ಸಭಾಂಗಣದಲ್ಲಿ ಗ್ರಾಮಸ್ಥರು ಹಾಗೂ ಪ.ಪಂ. ಮುಖ್ಯಸ್ಥರ ನಡುವೆ ಮಾತುಕತೆ ನಡೆಯಿತು. ತ್ಯಾಜ್ಯ ನೀರನ್ನು ಹೊರಬಿಡುತ್ತಿರುವ ತಸ್ಮಯ್ ರೆಸಿಡೆನ್ಸಿ ಹಾಗೂ ಕಮಲಮ್ಮ ವಸತಿ ಸಂಕೀರ್ಣ, ಸುವರ್ಣ ರೆಸಿಡೆನ್ಸಿ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಯ ಕುರಿತು ಪ.ಪಂ. ಸಾಮಾನ್ಯ ಸಭೆಯಲ್ಲೂ ಸಾಕಷ್ಟು ಚರ್ಚೆಯಾಗಿ ಶೀಘ್ರ ಕ್ರಮಕ್ಕೆ ಸದಸ್ಯರು ಒತ್ತಾಯವಾಗಿದೆ. ಆದರೂ ಕ್ರಮಕೈಗೊಳ್ಳಲು ಯಾಕೆ ಮೀನಾಮೇಷ ಎಣಿಸುತ್ತೀರಿ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ತತ್‌ಕ್ಷಣ ಕ್ರಮಕೈಗೊಳ್ಳಿ, ಇಲ್ಲವಾದರೆ ಗ್ರಾಮಸ್ಥರೇ ಕಾನೂನು ಕೈಗೆತ್ತಿಕೊಳ್ಳುತೇವೆ. ಮುಂದೆ ಆಗುವ ಎಲ್ಲ ಅನಾಹುತಗಳಿಗೆ ನೀವೇ ಜವಾಬ್ದಾರ ರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಮಟ್ಟುಗುಳ್ಳ ಬೆಳೆಗಾರರಿಗೆ ಪರಿಹಾರ ಧನ ವಿತರಿಸಿದ ಶಾಸಕ ಲಾಲಾಜಿ ಆರ್ ಮೆಂಡನ್
ಸದಸ್ಯ ರಾಜು ಪೂಜಾರಿ ಕಾರ್ಕಡ ಮಾತನಾಡಿ, ಅಕ್ರಮ ಕಟ್ಟಡಗಳು ಹಾಗೂ ತ್ಯಾಜ್ಯ ನೀರನ್ನು ಸಾರ್ವಜನಿಕ ಪ್ರದೇಶಕ್ಕೆ ಬಿಡುವುದರ ವಿರುದ್ಧ ಕ್ರಮಕೈಗೊಳ್ಳಲು ಯಾವುದೇ ನೋಟಿಸ್ ನೀಡುವ ಅಗತ್ಯವಿಲ್ಲ. ನೇರವಾಗಿ ಪೊಲೀಸ್‌ರೊಂದಿಗೆ ಸ್ಥಳಕ್ಕೆ ತೆರಳಿ ಕ್ರಮಕೈಗೊಳ್ಳಬಹುದು. ದಯವಿಟ್ಟು ಗ್ರಾಮಸ್ಥರ ಭಾವನೆಗಳಿಗೆ ಬೆಲೆ ನೀಡಿ ಎಂದರು. ಸ್ಥಾಯೀ ಸಮಿತಿ ಸದಸ್ಯ ಸಂಜೀವ ದೇವಾಡಿಗ, ಸದಸ್ಯ ಕರುಣಾಕರ ಮೊದ ಲಾದವರು, ಆಡಳಿತ ವ್ಯವಸ್ಥೆ ಕಠಿನ ಕ್ರಮ ತೆಗೆದುಕೊಳ್ಳಿ. ಸದಸ್ಯರು ನಿಮ್ಮ ಜತೆಗಿರುತ್ತೇವೆ ಎಂದು ಮುಖ್ಯಾಧಿಕಾರಿ ಶಿವ ನಾಯ್ಕ ಅವರಿಗೆ ತಿಳಿಸಿದರು. ಆಗ ಈ ಬಗ್ಗೆ ತತ್‌ಕ್ಷಣ ಕ್ರಮಕೈಗೊಳ್ಳುವುದಾಗಿ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ ಭರವಸೆ ನೀಡಿದರು ಹಾಗೂ ಸ್ಥಳಕ್ಕೆ ತೆರಳಲು ತಯಾರಿ ನಡೆಸು ವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಪ.ಪಂ. ಉಪಾಧ್ಯಕ್ಷೆ ಅನಸೂಯಾ ಹೇಳೆì, ಸದಸ್ಯರಾದ ಶ್ಯಾಮ್‌ಸುಂದರ್ ನಾೖರಿ ಹಾಗೂ ಸ್ಥಳೀಯ ವಾರ್ಡ್ ಸದಸ್ಯ ಸುಕನ್ಯಾ ಶೆಟ್ಟಿ, ನಾಗರಿಕ ಹಿತರಕ್ಷಣ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದಿನ ವರದಿಗೆ ಶ್ಲಾಘನೆ
ತ್ಯಾಜ್ಯ ನೀರಿನಿಂದ ಹೊಳೆ ಕಲುಷಿತ ವಾಗಿರುವುದು ಹಾಗೂ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿರುವ ಕುರಿತು ವಿಸ್ಕೃತ ವರದಿ ಪ್ರಕಟಿಸಿ ಆಡಳಿತ ವ್ಯವಸ್ಥೆಯ ಗಮನಸೆಳೆದ “ಉದಯವಾಣಿ’ “ಸುದಿನ’ ವರ ದಿಗೆ ಹಾಗೂ ಕ್ರಮಕೈಗೊಂಡ ಪ.ಪಂ. ಆಡಳಿತ ಮಂಡಳಿ ಸದಸ್ಯರು ಮತ್ತು ಅಧಿಕಾರಿಗಳಿಗೆ ನಾಗರಿಕ ಹಿತರಕ್ಷಣ ಸಮಿತಿಯವ ರು ಕೃತಜ್ಞತೆ ಸಲ್ಲಿಸಿದರು.
ಪೈಪ್ ತೆರವು
ಸಭೆಯ ಅನಂತರ ಜೆಸಿಬಿ ಹಾಗೂ ಪೌರಕಾರ್ಮಿಕರೊಂದಿಗೆ ಇಲ್ಲಿನ ಕಮಲಮ್ಮ ವಸತಿ ಸಂಕೀರ್ಣದ ಬಳಿ ತೆರಳಿದ ಪ.ಪಂ. ಮುಖ್ಯಸ್ಥರು ಪೈಪ್‌ಲೈನ್ ಸಂಪರ್ಕವನ್ನು ತೆರವುಗೊಳಿಸಿದರು ಹಾಗೂ ತಸ್ಮಯ್ ರೆಸಿಡೆನ್ಸಿ, ಸುವರ್ಣ ರೆಸಿಡೆನ್ಸಿ ವಿರುದ್ಧ ಗುರುವಾರ ಇದೇ ರೀತಿಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.