ಹೊಸದಿಲ್ಲಿ: ಐಎನ್‌ಎಕ್ಸ್ ಪ್ರಕರಣದಲ್ಲಿ ಅಕ್ರವಾಗಿ ಹಣ ವರ್ಗಾವಣೆ ನಡೆದಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ. ಕೇಂದ್ರ ತನಿಖಾ ಸಂಸ್ಥೆಯ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಚಿದಂಬರಂ ಕುಟುಂಬ ಮತ್ತು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದಂತೆ ಇದೊಂದು ಪ್ರತೀಕಾರದ ಕ್ರಮವಲ್ಲ. ಐಎನ್‌ಎಕ್ಸ್ ಪ್ರಕರಣದಲ್ಲಿ ಹಣಕಾಸು ಅಕ್ರಮ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಗಳು ಇವೆ ಮತ್ತು ನಾವು ಅದನ್ನು ಸಂಗ್ರಹಿಸಿಯೂ ಇದ್ದೇವೆ ಎಂದು ವಾದಿಸಿದರು.
ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸಕೂಡದು ಎಂಬುದನ್ನು ಸಾಬೀತುಮಾಡಲು ಚಿದಂಬರಂ ತಮ್ಮನ್ನು ಬಲಿಪಶು ಎಂಬಂತೆ ಚಿತ್ರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮೆಹ್ತಾ ದೂರಿದರು. ಈ ಹಂತದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮೆಹ್ತಾ ಅರಿಕೆ ಮಾಡಿಕೊಂಡರು. ತನಿಖಾ ಸಂಸ್ಥೆ ಅವರಿಗೆ ಮುಜುಗರಗೊಳಿಸಲು ಬಂಧಿಸುವುದು ಅಲ್ಲ ಬದಲಾಗಿ ಅದನ್ನು ತಡೆಯಲು ಎಂದು ಹೇಳಿಕೊಂಡರು.
ತಡೆಯಲು ಯತ್ನ: ಮಾಜಿ ಸಚಿವರ ಮುಂದೆ ಇಂಗ್ಲಿಷ್ ಅಕ್ಷರ ಮಾಲೆ “ಪಿ’ ಅನ್ನುವ ಇನಿಶಿಯಲ್ ಎನ್ನುವುದು ತಡೆ (ಪ್ರಿವೆನ್ಶನ್) ಎನ್ನುವುದನ್ನು ಸೂಚಿಸುತ್ತದೆ. ಅದಕ್ಕೆ ಪೂರಕವಾಗಿಯೇ ಇ.ಡಿ.ಗೆ ಬಂಧನ ನಡೆಸದಂತೆ ಯತ್ನಿಸುತ್ತಿದ್ದಾರೆ ಎಂದು ಮೆಹ್ತಾ ಟೀಕಿಸಿದರು.
ನ್ಯಾ|ಆರ್.ಭಾನುಮತಿ ಮತ್ತು ನ್ಯಾ|ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ವಾದಗಳನ್ನು ಆಲಿಸಿ ಗುರುವಾರದ ವರೆಗೆ ಮಾಜಿ ಸಚಿವರನ್ನು ಬಂಧಿಸಬಾರದು ಎಂದು ಹೇಳಿತು. ಚಿದು ಪರ ವಾದಿಸಿದ ಮಾಜಿ ಸಚಿವ ಕಪಿಲ್ ಸಿಬಲ್ 2018 ಮತ್ತು 2019ರಲ್ಲಿ ಅವರ ವಿಚಾರಣೆ ನಡೆಸಲಾಗಿತ್ತು. ಅದರ ಮುದ್ರಿತ ಅಂಶಗಳು ಎಲ್ಲಾ ಸಂದೇಹ ನಿವಾರಿಸಲಿವೆ ಎಂದರು. ಮತ್ತೂಬ್ಬ ವಕೀಲ ಎ.ಎಂ.ಸಿಂ Ì ಮಾತನಾಡಿ ತನಿಖೆಯ ವೇಳೆ ಅವರು ಸಹಕರಿಸಿದ್ದರು ಎಂದರು.