Advertisement

ಅಕ್ರಮ ಗಣಿಗಾರಿಕೆ ಕೇಸ್; HDK, ಧರಂ ವಿರುದ್ಧ ತನಿಖೆಗೆ ಸುಪ್ರೀಂ ಆದೇಶ

01:15 PM Mar 30, 2017 | Team Udayavani |

ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ದೇವೇಗೌಡ ಹಾಗೂ ಧರಂಸಿಂಗ್ ವಿರುದ್ಧ ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.

Advertisement

1999 ಹಾಗೂ 2004ರ ನಡುವೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಚ್ ಡಿಕೆ ಹಾಗೂ ಧರಂ ಸಿಂಗ್ ಅವರು ಅಕ್ರಮ ಗಣಿಗಾರಿಕೆ ನಡೆಸಲು ಭಾರೀ ಪ್ರಮಾಣದಲ್ಲಿ ಅರಣ್ಯ ಭೂಮಿಯನ್ನು ಮಂಜೂರು ಮಾಡಿರುವ ಪ್ರಕರಣ ಇದಾಗಿದೆ.

ಮಾಜಿ ಸಿಎಂಗಳ ವಿರುದ್ಧದ ಪ್ರಕರಣದ ತನಿಖೆ ಬಗ್ಗೆ ಬೇರೆ ಯಾವುದೇ ಕೋರ್ಟ್ ಗಳು ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಪೀಠದ ಜಸ್ಟೀಸ್ ಪಿನಾಕಿ ಚಂದ್ರ ಘೋಷ್ ಹಾಗೂ ನ್ಯಾ.ರೋಹ್ಟಿಂನ್ ಎಫ್.ನಾರಿಮನ್ ನಿರ್ದೇಶನ ನೀಡಿದ್ದಾರೆ. 

ಅಕ್ರಮ ಗಣಿಗಾರಿಕೆಗೆ ಭೂಮಿ ಮಂಜೂರು ಮಾಡಿದ ಪ್ರಕರಣದಲ್ಲಿ ಮತ್ತೊಬ್ಬ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕೂಡಾ ಆರೋಪಿತರಾಗಿದ್ದರು. ಆದರೆ ಸುಪ್ರೀಂಕೋರ್ಟ್ ಕಳೆದ ನವೆಂಬರ್ ನಲ್ಲಿ ಕೃಷ್ಣ ವಿರುದ್ಧದ ತನಿಖೆಗೆ ತಡೆ ನೀಡಿತ್ತು. ಆದರೆ ಒಂದು ವೇಳೆ ತನಿಖೆಗೆ ಅಗತ್ಯವಾಗಿದ್ದರೆ ಕೃಷ್ಣ ವಿರುದ್ಧದ ನಿರ್ಬಂಧವನ್ನು ತೆರವುಗೊಳಿಸುವ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next