ಮಂಡ್ಯ: ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಾನು ಬಂದು ನಿಮಗೆತೋರಿಸಬೇಕಾ? ಎಂದು ಗಣಿ ಮತ್ತು ಭೂ ವಿಜಾnನ ಅಧಿಕಾರಿಗಳನ್ನು ಸಂಸದೆ ಸುಮಲತಾ ಅಂಬರೀಷ್ ತರಾಟೆಗೆ ತೆಗೆದುಕೊಂಡರು.
ಶ್ರೀರಂಗಪಟ್ಟಣ ವ್ಯಾಪ್ತಿಯ ಚೆನ್ನನಕೆರೆ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲನೆ ನಡೆಸಿದರು.ಅಕ್ರಮ ಗಣಿಗಾರಿಕೆ ವಿರುದ್ಧ ಎಷ್ಟು ದಂಡ ಹಾಕಿದ್ದೀರಾ? ಏನುಕ್ರಮ ಆಗಿದೆ?.
ನಿನ್ನೆಯೂ ಇಲ್ಲಿ ಅಕ್ರಮ ಗಣಿ ಚಟುವಟಿಕೆ ನಡೆದಿದೆ. ದೊಡ್ಡ ದೊಡ್ಡ ಟ್ರಕ್‌ಓಡಾಡಿರುವ ಗುರುತು ಕಾಣುತ್ತಿವೆ. ಸಭೆಯಲ್ಲಿ ಕುಳಿತು ಸುಲಭವಾಗಿಹೇಳುತ್ತೀರಾ?. ನೀವು ಅಕ್ರಮದ ವಿರುದ್ಧ ಏನುಕ್ರಮಕೈಗೊಂಡಿದ್ದೀರಾ? ಎಂದುಪ್ರಶ್ನಿಸಿದಾಗ ಅಧಿಕಾರಿಗಳು ತಬ್ಬಿಬ್ಬುಗೊಂಡರು.ಸುಮಲತಾ ಅವರ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲು ತಡವರಿಸಿದರು.
ಅಕ್ರಮವಾಗಿ ಎಷ್ಟು ಕಲ್ಲು ಹಾಗೂ ಇತರೆ ಗಣಿಗೆ ಸಂಬಂಧಿಸಿದ ಕಚ್ಚಾ ವಸ್ತುತೆಗೆಯಲಾಗಿದೆ ಎಂಬ ಪ್ರಶ್ನೆಗೆ ಅಧಿಕಾರಿಗಳು, ಮೌನವಾಗಿದ್ದರು. ಗಣಿಅಧಿಕಾರಿಯೊಬ್ಬ ಫೈಲ್ ತೆಗೆದು 2.74 ಲಕ್ಷ ಮೆಟ್ರಿಕ್ ಟನ್‌ನಷ್ಟು ಕಲ್ಲುತೆಗೆಯಲಾಗಿದೆ. ಅದಕ್ಕೆ ದಂಡ ವಿಧಿಸಲಾಗಿದೆ ಎಂದು ಉತ್ತರಿಸಿದರು.
ಎಷ್ಟುದಂಡ ಎಂದಾಗ ಸಮರ್ಪಕ ಉತ್ತರ ಬರಲಿಲ್ಲ. ಸುಮಾರು 300 ಕೋಟಿ ರೂ.ಗೂಹೆಚ್ಚು ಸರ್ಕಾರಕ್ಕೆ ನಷ್ಟವಾಗಿದೆ. ಅಷ್ಟೂ ದಂಡವನ್ನು ವಸೂಲಿ ಮಾಡಿಲ್ಲ. ಕೂಡಲೇಎಲ್ಲಾ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು. ಇಲ್ಲದಿದ್ದರೆ, ನಾನು ಪ್ರಧಾನ ಮಂತ್ರಿಗೆದೂರು ನೀಡುತ್ತೇನೆಂದು ಎಚ್ಚರಿಸಿದರು.