Advertisement

ಅಕ್ರಮ ಮಾಸ್ಕ್: 13.37 ಲಕ್ಷ ದಂಡ

05:35 AM Jul 03, 2020 | Lakshmi GovindaRaj |

ಬೆಂಗಳೂರು: ಕೋವಿಡ್‌-19 ಹಿನ್ನೆಲೆ ಅಕ್ರಮವಾಗಿ ಅಧಿಕ ದರಕ್ಕೆ ಮಾಸ್ಕ್  ಮಾರಾಟ ಮಾಡುತ್ತಿದ್ದ 6958 ಔಷಧ ಮಳಿಗೆಗಳು ಮತ್ತು ಸಗಟು ಮಳಿಗೆಗಳ ವಿರುದ್ಧ ದಾಳಿ ನಡೆಸಿ, 13.37 ಲಕ್ಷ ರೂ. ದಂಡವನ್ನು ರಾಜ್ಯ ಸರ್ಕಾರ ಸಂಗ್ರಹಿಸಿದೆ.

Advertisement

ಅಕ್ರಮ ಮಾಸ್ಕ್ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಡಾ. ರಾಜೀವ್‌ ಆರ್‌. ಗೋತೆ, ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ. ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಈ  ಮಾಹಿತಿ ಸಲ್ಲಿಸಿದೆ.

ಮಾರ್ಚ್‌ 2020 ರಿಂದ ಈವರೆಗೆ ಅಕ್ರಮ ಮಾಸ್ಕ್ ದಾಸ್ತಾನು ಮತ್ತು ಮಾರಾಟದ ವಿರುದ್ಧ ರಾಜ್ಯದ ಹತ್ತು ವಲಯಗಳಲ್ಲಿ 6,958 ಕಡೆ ದಾಳಿ ನಡೆಸಿ, ಒಟ್ಟು 335 ಪ್ರಕ ರಣಗಳನ್ನು  ದಾಖಲಿಸಿ, ಒಟ್ಟು 13.37 ಲಕ್ಷ ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next