Advertisement

ಅಕ್ರಮ ಗಾಂಜಾ ಸಾಗಾಟ; 5 ಕೆಜಿ ಗಾಂಜಾ, ನಗದು ವಶಕ್ಕೆ

04:09 PM May 03, 2020 | keerthan |

ಯಾದಗಿರಿ: ಟೆಂಪೊ ಗೂಡ್ಸ್ ವಾಹನದಲ್ಲಿ ಅಕ್ರಮ ಗಾಂಜಾ ಸಾಗಿಸುತ್ತಿದ್ದ ಮೂವರನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಗಳಾದ ನಿಂಗಪ್ಪ ಬಾಣತಿಹಾಳ, ಮೊಹಮ್ಮದ್ ಸೈಫಿಯಾನಾ ಬೆಂಗಳೂರು ಹಾಗೂ ಮೊಹಮ್ಮದ್ ಜುಬೇರ್ ಪುತ್ತೂರ  ಬಂಧಿತ ಆರೋಪಿಗಳು.

ಜಿಲ್ಲೆಯ ಶಹಾಪುರ ನಗರದ ಹತ್ತಿರದ ಶಿರವಾಳ ಕ್ರಾಸ್ ಬಳಿ ರವಿವಾರ ಬೆಳಿಗ್ಗೆ 407 ಟೆಂಪೊ ಗೂಡ್ಸ್ ವಾಹನದಲ್ಲಿ ಇವರು ಅಕ್ರಮ ಅಮಲು ಪದಾರ್ಥವನ್ನು ಸಾಗಿಸುತ್ತಿದ್ದರು.

ಬಂಧಿತರಿಂದ 55 ಸಾವಿರ ರೂಪಾಯಿ ಮೌಲ್ಯದ ಐದು ಕೆಜಿ ಗಾಂಜಾ ಹಾಗು 20 ಸಾವಿರ ನಗದನ್ನು ವಶಪಡಿಸಲಾಗಿದೆ.

ಸಿಪಿಐ ಹಣಮರೆಡ್ಡೆಪ್ಪ ಹಾಗೂ ಸಿಬ್ಬಂದಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next