Advertisement

“ವೈಟ್‌ಲಿಸ್ಟ್‌’ನಲ್ಲಿರುವ ಆ್ಯಪ್‌ ಗಳಿಂದ ಮಾತ್ರ ಸಾಲ ಪಡೆಯಿರಿ

09:50 AM Sep 10, 2022 | Team Udayavani |

ನವದೆಹಲಿ: ಇನ್ನು ಮುಂದೆ, ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಪಟ್ಟಿ ಮಾಡುವ ಲೋನ್‌ ಆ್ಯಪ್‌ಗ್ಳ ಮೂಲಕವಷ್ಟೇ ನೀವು ಆನ್‌ಲೈನ್‌ ಸಾಲ ಪಡೆಯಬಹುದು.

Advertisement

ದೇಶಾದ್ಯಂತ ಕಾನೂನುಬಾಹಿರ ಡಿಜಿಟಲ್‌ ಲೋನ್‌ ಆ್ಯಪ್‌ ಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಅದರಂತೆ, “ಸಾಲ ನೀಡುವ ಕಾನೂನುಬದ್ಧವಾದ ಆ್ಯಪ್‌’ಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಸರ್ಕಾರವು ಆರ್‌ಬಿಐಗೆ ಸೂಚಿಸಿದೆ. ಆರ್‌ಬಿಐ ಇಂಥ ಕಾನೂನುಬದ್ಧ ಆ್ಯಪ್‌ ಗಳ “ವೈಟ್‌ಲಿಸ್ಟ್‌’ ತಯಾರಿಸಲಿದ್ದು, ದೇಶದ ನಾಗರಿಕರು ಈ ಪಟ್ಟಿಯಲ್ಲಿರುವ ಆ್ಯಪ್‌ ಗಳಿಂದ ಮಾತ್ರ ಸಾಲ ಪಡೆಯಬಹುದು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆಯ ಹೊರಗಿರುವಂಥ ಕಾನೂನುಬಾಹಿರ ಲೋನ್‌ ಆ್ಯಪ್‌ ಗಳು ಕಡಿಮೆ ಆದಾಯವಿರುವ ಜನರನ್ನು ವಂಚಿಸುತ್ತಿರುವ ಬಗ್ಗೆ ಅನೇಕ ದೂರುಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು. ಪ್ರಸಕ್ತ ವರ್ಷದ ಆರಂಭದಲ್ಲಿ ಆರ್‌ಬಿಐ ಸುಮಾರು 600ರಷ್ಟು ಅಕ್ರಮ ಲೋನ್‌ ಆ್ಯಪ್‌ ಗಳನ್ನು ಪತ್ತೆಹಚ್ಚಿತ್ತು.

Advertisement

Udayavani is now on Telegram. Click here to join our channel and stay updated with the latest news.

Next