Advertisement

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ: ಕ್ರಮಕ್ಕೆ ಆಗ್ರಹ

01:45 PM Nov 07, 2020 | Suhan S |

ಯಳಂದೂರು: ತಾಲೂಕಿನಲ್ಲಿ ಮದ್ಯದಂಗಡಿಗಳಿಂದ ಬೈಕ್‌ಗಳ ಮೂಲಕ ಸಾಗಿಸಿ ಗ್ರಾಮೀಣ ಭಾಗದಲ್ಲಿಮದ್ಯಮಾರಾಟಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ, ವರ್ಗಗಳ ಹಿತರಕ್ಷಣಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕೆಲ ನಾಗರಿಕರು, ತಾಲೂಕಿನಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಪ್ರತಿ ವೈನ್‌ಶಾಪ್‌ಗ್ಳಿಂ ದಲೂ ಬೈಕ್‌ಗಳ ಮೂಲಕ ಕಳ್ಳದಾರಿಯಲ್ಲಿ ಇದನ್ನು ಮಾರಾಟ ಮಾಡುವ ವ್ಯಕ್ತಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ದೂರಿದರು.

ಪಟ್ಟಣದ ಶ್ರೀರಂಗ ವೈನ್‌ಶಾಪ್‌ ನಾಡ ಮೇಗಲಮ್ಮ ದೇಗುಲದ ಬಳಿಯಲ್ಲೇ ಇದೆ. ಆದರೆ, ಇದಕ್ಕೆಕುಂಬಾರಗುಂಡಿ ವ್ಯಾಪ್ತಿ ಎಂದು ಪರವಾನಗಿ ನೀಡಲಾಗಿದೆ. ಕೂಡಲೇ ಇದನ್ನು ಸ್ಥಳಾಂತರಿಸಬೇಕು. ಪ್ರತಿ ಅಂಗಡಿಯಲ್ಲೂಮದ್ಯ ಮಾರಾಟ ದರದ ಬೋರ್ಡ್‌ ಹಾಕ ಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವು ದಾಗಿ ತಹಶೀಲ್ದಾರ್‌ ಸುದರ್ಶನ್‌ ಭರವಸೆ ನೀಡಿದರು.

ತಾಲೂಕು ಪಂಚಾಯಿತಿಯ ಶೇ. 25ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ, ವರ್ಗಗಳಿಗೆಮೀಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೂಈ ಹಣ ನೀಡಲಾಗುತ್ತದೆ. ಆದರೆ, ಇದನ್ನುಬಳಸಿರುವ ಬಗ್ಗೆ ಮಾಹಿತಿಯೇ ಇರುವುದಿಲ್ಲ.ಇದು ದುರ್ಬಳಕೆಯಾಗುತ್ತಿದೆ. ಈ ಬಗ್ಗೆ ಪ್ರತಿ ಗ್ರಾಪಂಕಚೇರಿಯಲ್ಲೂ ಈ ಹಣ ಬಳಕೆಯಾಗಿರುವಬಗ್ಗೆ ನೋಟಿಸ್‌ಬೋರ್ಡ್‌ನಲ್ಲಿಮಾಹಿತಿ ಹಾಕಬೇಕು ಎಂದರು. ಇಒ ಬಿ.ಎಸ್‌. ರಾಜು ಮಾತನಾಡಿ, ಈ ಬಗ್ಗೆ ಪ್ರತಿ ಗ್ರಾಪಂ®ಲ್ಲೂ ಪ್ರಕಟಣೆ ಹಾಕಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆಯವತಿಯಿಂದ ಪದವಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಇಲ್ಲ ಎಂದು ದೂರಿದರು. ಇದಕ್ಕೆ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್‌. ಜಯಕಾಂತ ಪ್ರತಿಕ್ರಿಯಿಸಿ, ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.

Advertisement

ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ, ಸಿಪಿಐ ಶೇಖರ್‌, ಉಪ ನೋಂದಣಾಧಿಕಾರಿ ರುದ್ರಯ್ಯ, ಬಿಇಒ ವಿ. ತಿರುಮಲಾಚಾರಿ, ಸಿ. ರಾಜಣ್ಣ, ಮೌರ್ಯ, ಸುರೇಶ್‌ಕುಮಾರ್‌, ಮಹೇಶ್‌ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next