ಚನ್ನರಾಯಪಟ್ಟಣ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದ್ದು, ಮದ್ಯ ಮಾರಾಟದ ಅಂಗಡಿಗಳಿಗೆ ಅಬಕಾರಿ ಇಲಾಖೆಯಿಂದ ಬೀಗಮುದ್ರೆ ಹಾಕಿದರೂ ತಾಲೂಕಿನಲ್ಲಿ ಹಿಂಬಾಗಿಲಿನ ಮೂಲಕ ಅತಿ ಹೆಚ್ಚು ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಮದ್ಯದ ಅಂಗಡಿಯ ಮುಂಭಾಗ ಮಾತ್ರ ಅಬಕಾರಿ ಇಲಾಖೆ ಬೀಗ ಹಾಕಿ ಸೀಲ್ ಮಾಡಿದೆ. ಹಲವು ಮದ್ಯದ ಅಂಗಡಿಯಲ್ಲಿ ಎರಡ್ಮೂರು ಬಾಗಿಲುಗಳಿದ್ದು, ಅವುಗಳ ಮೂಲಕ ಅಂಗಡಿಯಲ್ಲಿ ಶೇಖರಿಸಲಾಗಿದ್ದ ಮದ್ಯವನ್ನು ಹೊರ ತೆಗೆದು ಒಂದು ಕ್ವಾರ್ಟರ್‌ಗೆ 300 ರಿಂದ 450 ರೂ.ಗೆ ಮಾರಾಟ ಮಾಡುತ್ತಿದೆ. ಬಗ್ಗೆ ಶಾಸಕರು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದಾರೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳ ತೋಟದ ಮನೆಗಳಲ್ಲಿ ಮದ್ಯ ದಾಸ್ತಾನು ಮಾಡಿರುವ ಮದ್ಯದ ಅಂಗಡಿಗಳ ಮಾಲೀಕರು ಅಕ್ರಮವಾಗಿ ಅತಿ ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನಪ್ರತಿ ನಿಧಿಗಳೇ ಆಪಾದಿಸುತ್ತಿದ್ದಾರೆ.
ಅಕ್ರಮವಾಗಿ ಮದ್ಯ ಮಾರಾಟ ತಡೆಗೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಯಿಂದ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಮದ್ಯ ಮಾರಾಟ ಮಾಡು ವವರ ಪಟ್ಟಿ ನೀಡುತ್ತೇನೆ ಅವರ ಪರವಾನಗಿ ರದ್ದು ಮಾಡಲು ಸರ್ಕಾರ ಮುಂದಾಗಬೇಕು.
– ಎಚ್.ಡಿ.ರೇವಣ್ಣ , ಶಾಸಕ
-ಶಾಮಸುಂದರ್ ಕೆ. ಅಣ್ಣೇನಹಳ್ಳಿ