Advertisement

ಅಕ್ರಮ ಮದ್ಯ ಮಾರಾಟಕ್ಕಿಲ್ಲ ಕಡಿವಾಣ

04:24 PM Mar 08, 2022 | Team Udayavani |

ತಿಪಟೂರು: ತಾಲೂಕಿನಾದ್ಯಂತ ಮೂಲೆ ಮೂಲೆಗಳ ಹಳ್ಳಿಗಳೆಲ್ಲೆಲ್ಲಾ ಅಕ್ರಮ ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಕಂಡೂ ಕಾಣದಂತಿರುವ ಅಬಕಾರಿಹಾಗೂ ಪೊಲೀಸ್‌ ಅಧಿಕಾರಿಗಳವಿರುದ್ಧ ತಾಲೂಕಿನ ಬಹುತೇಕಮಹಿಳಾ ಸಂಘಟನೆಗಳು,ಮಹಿಳಾ ಸ್ವಸಹಾಯ ಸಂಘಗಳ ಮುಖಂಡರು ಈಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕೋವಿಡ್‌-19ನಿಂದ ಬದುಕು ನಡೆಸುವುದೇ ದುಸ್ತರವಾಗಿರುವಇಂತಹ ಸಮಯದಲ್ಲಿ ಒಂದೊಂದು ಗ್ರಾಮದಲ್ಲಿ 2, 3 ಅಂಗಡಿ, ಮನೆಗಳಲ್ಲಿ ಅಕ್ರಮವಾಗಿಮದ್ಯ ಮಾರುತ್ತಿರುವುದರಿಂದ ಬಡ, ಕೂಲಿಹಾಗೂ ಮಧ್ಯಮ ಕುಟುಂಬಗಳು ಬೀದಿ ಪಾಲಾಗುತ್ತಿರುವ ಬಗ್ಗೆ ಅಬಕಾರಿ, ಪೊಲೀಸ್‌ಇಲಾಖೆಗಳಿಗೆ ತಿಳಿಸಿದರೂ ನಿಯಂತ್ರಣ ಆಗದಿರುವುದು ಸಂಶಯಕ್ಕೆ ಕಾರಣವಾಗಿದೆ.

ಆರ್ಥಿಕ ಸಂಕಷ್ಟದಲ್ಲಿ ಕುಟುಂಬಗಳು: ಕೋವಿಡ್‌-19ನಿಂದಾಗಿ ಕೂಲಿ ಕೆಲಸಗಳೇವಿರಳವಾಗಿದೆ. ಆದರೂ ವಾರದಲ್ಲಿ ಸಿಗುವಒಂದೆರಡು ಕೂಲಿ ಕೆಲಸಮಾಡಿಕೊಂಡು ಜೀವನನಡೆಸುತ್ತಾರೆ. ಕೂಲಿ ಹಣವನ್ನೇಕುಡಿತಕ್ಕೆ ಖರ್ಚು ಮಾಡುತ್ತಿದ್ದು,ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಕಷ್ಟಕರವಾಗುತ್ತಿದೆ ಎಂದುಮಹಿಳೆಯರು ಅಳಲಾಗಿದೆ.

ಕೆಲ ಬಾರ್‌ಗಳವರು ಹುಡುಗರನ್ನುಇಟ್ಟುಕೊಂಡು ಹಳ್ಳಿಗಳಲ್ಲಿ ಮಾರುವವರಿಗೆ ರಾತ್ರಿ ವೇಳೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಮಾರುವವರು ಪ್ರತಿ ಪ್ಯಾಕೆಟ್‌ಗೆ 20-25 ರೂ. ಹೆಚ್ಚಿನ ಲಾಭಇಟ್ಟುಕೊಂಡು ಮಾರಾಟ ಮಾಡುತ್ತಿರುವಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಇದ್ದರೂನಿಯಂತ್ರಣ ಮರೀಚಿಕೆಯಾಗಿದೆ.

ಹಳ್ಳಿಗಳನ್ನು ಉಳಿಸಿಕೊಡಿ: ತಾಲೂಕಿನ ಬಹುತೇಕ ಹಳ್ಳಿಗಳಲ್ಲಿನ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ಜಿಲ್ಲಾಧಿಕಾರಿಗಳು,ಜಿಲ್ಲಾ, ತಾಲೂಕು ಅಬಕಾರಿ ಅಧಿಕಾರಿಗಳಮೇಲೆ ಹಾಗೂ ಅಕ್ರಮ ಮದ್ಯದಂಗಡಿಗಳವಿರುದ್ಧ ಕಠಿಣ ಕಾನೂನು ಕ್ರಮ ತೆಗೆದು ಕೊಂಡು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದಂಧೆಯನ್ನು ನಿಲ್ಲಿಸಬೇಕೆಂದು ಮಹಿಳಾ ಸಂಘಟನೆಯವರು ಒತ್ತಾಯಿಸಿದ್ದಾರೆ.

Advertisement

35 ರೂ. ರಾಜಾ ಪ್ಯಾಕೆಟ್‌ 55-60ಕ್ಕೆ ಮಾರಾಟ :

ಎಂಎಸ್‌ಐಎಲ್‌ ಮಳಿಗೆಯಲ್ಲಿ ಮಾರಾಟವಾಗುವ ಒಂದು ರಾಜಾಪ್ಯಾಕೆಟ್‌ ಎಣ್ಣೆಗೆ 35 ರೂ. ಇದ್ದರೆ, ಹಳ್ಳಿಗಳಲ್ಲಿ ಅಕ್ರಮವಾಗಿ ಮಾರಾಟವಾಗುವ ಇದೇ ಪ್ಯಾಕೆಟ್‌ 55ರಿಂದ 60ರೂ. ತನಕ ಮಾರಾಟ ಮಾಡಲಾಗುತ್ತಿದೆ. ಮನೆ ಮುಂದೆ, ಗ್ರಾಮಗಳಲ್ಲಿಯೇ ಸಿಗುತ್ತಲ್ಲ ಎಂಬ ಮನೋಭಾವನೆಯಿಂದ ಮದ್ಯವ್ಯಸನಿಗಳು ದುಪ್ಪಟ್ಟು ಹಣ ನೀಡಿ ಖರೀದಿಸುತ್ತಾರೆ.

ನಗರ ಅಥವಾ ಹಳ್ಳಿಗಳಲ್ಲಿಪರವಾನಿಗೆ ಇಲ್ಲದೆ ಮದ್ಯಮಾರಾಟ ಮಾಡುವುದುಅಪರಾಧವಾಗಿದ್ದು, ತಾಲೂಕಿನಹಳ್ಳಿಗಳಲ್ಲಿ ಅಕ್ರಮ ಮದ್ಯಮಾರಾಟ ನಡೆಯುತ್ತಿರುವವಿಷಯ ನಮ್ಮ ಇಲಾಖೆಯಗಮನಕ್ಕೂ ಬಂದಿದೆ. ನಮ್ಮ ಕೆಲಅಧಿಕಾರಿಗಳೇ ಇವರಿಗೆ ಕುಮ್ಮಕ್ಕುನೀಡಿ ದಾಳಿ ಮಾಡುವಂತೆ ನಟಿಸಿಮತ್ತೆ ಬಿಟ್ಟು ಕಳಿಸಿ ಮಾರಲು ದಾರಿಸುಗಮಗೊಳಿಸು ತ್ತಿದ್ದಾರೆ. ನಮ್ಮಹಾಗೂ ಪೊಲೀಸ್‌ ಅಧಿಕಾರಿಗಳುಲಂಚದಾಸೆಗೆ ಬಿದ್ದು ಅಕ್ರಮಮಾರಾಟಗಾರರಿಗೇ ರಕ್ಷಣೆಒದಗಿಸಿ ಹಳ್ಳಿಗಳನ್ನು ಕುಡುಕರ ತಾಣಗಳಾಗಿಸುತ್ತಿರುವುದು ನೋವಿನ ಸಂಗತಿ.-ಹೆಸರೇಳಲಿಚ್ಚಿಸದ ಅಬಕಾರಿ ಅಧಿಕಾರಿ, ತಿಪಟೂರು

– ಬಿ.ರಂಗಸ್ವಾಮಿ, ತಿಪಟೂರು

Advertisement

Udayavani is now on Telegram. Click here to join our channel and stay updated with the latest news.

Next