Advertisement

ವಿಶೇಷ ಘಟಕ ಯೋಜನೆಯಲ್ಲಿ ಅಕ್ರಮ: ತನಿಖೆಗೆ ಆಗ್ರಹ

09:19 AM Aug 03, 2017 | Team Udayavani |

ಲಿಂಗಸುಗೂರು: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ತಾಲೂಕಿಗೆ ಮಂಜೂರಾದ ಕಾಮಗಾರಿಗಳಲ್ಲಿ ಅಕ್ರಮವಾಗಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಸಮತಾ ದಲಿತ ಮಹಾಸಭಾ ಕಾರ್ಯಕರ್ತರು ಬುಧವಾರ
ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಗೌಡೂರು, ಗುರುಗುಂಟಾ, ಮಾಚನೂರು, ಮಾಚನೂರು ತಾಂಡಾ ಸೇರಿ ಅನೇಕ ಗ್ರಾಮಗಳಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಎಸ್‌ಸಿ ಹಾಗೂ ಎಸ್‌ಟಿ ಕಾಲೋನಿಗಳಲ್ಲಿ ಮಾಡಬೇಕಾದ ಕಾಮಗಾರಿಗಳನ್ನು ಬೇರೆ ಕಾಲೋನಿಗಳಲ್ಲಿ ಮಾಡಲಾಗಿದೆ. ಕೂಡಲೇ
ಗುತ್ತಿಗೆದಾರರ ಲೈಸನ್ಸ್‌ ರದ್ದುಪಡಿಸಬೇಕು. ಇನ್ನೂ ಕೆಲವು ಗ್ರಾಮಗಳಲ್ಲಿ ಕಾಮಗಾರಿಗಳು ಸಂಪೂರ್ಣ ಕಳಪೆಮಟ್ಟದಾಗಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. 2016-17ನೇ ಸಾಲಿನಲ್ಲಿ ಲಿಂಗಸುಗೂರು ಪಟ್ಟಣದ ಪ್ರವಾಸಿಮಂದಿರದಲ್ಲಿ ಉದ್ಯಾನವನ ನಿರ್ಮಿಸಲು ಐದು ಲಕ್ಷ ರೂ. ಮಂಜೂರಾಗಿದ್ದು ಆದರೆ ಅಂದಾಜು ವೆಚ್ಚದ ಪತ್ರಿಕೆಯಂತೆ ಕಾಮಗಾರಿ ಮಾಡದೇ ಸಂಪೂರ್ಣ ಕಳಪೆ ಮಟ್ಟದಾಗಿದೆ. ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸಬೇಕು. ಕಳೆದ ಸಾಲಿನ ಹಿಂಗಾರು ಮತ್ತು ಮುಂಗಾರು ಬೆಳೆ ಪರಿಹಾರ ಹಣ ಶೇ. 30 ರೈತರ ಖಾತೆಗೆ ಜಮೆ ಆಗಿಲ್ಲ. ಇದರಿಂದಾಗಿ ರೈತರು ಕಚೇರಿಗೆ ಅಲೆದಾಡುವಂತಾಗಿದೆ.

ಕೂಡಲೇ ರೈತರ ಖಾತೆಗೆ ಹಣ ಜಮಾ ಮಾಡಬೇಕು. ಗೌಡೂರು ಗ್ರಾಮ ಪಂಚಾಯತಿಯಲ್ಲಿ 2016-17ನೇ ಸಾಲಿನ ವಸತಿ ಯೋಜನೆಯ ಅಂಬೇಡ್ಕರ್‌, ಬಸವ ವಸತಿ ಯೋಜನೆಯಡಿ 217 ಮನೆಗಳು ಮಂಜೂರಾಗಿದ್ದು, ಮನೆ ಹಂಚಿಕೆಯಲ್ಲಿ ಗ್ರಾಪಂ ಅಧ್ಯಕ್ಷ, ಸದಸ್ಯರು ಹಾಗೂ ಪಿಡಿಒ ಹಣ ನೀಡಿದವರಿಗೆ ಮನೆ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಮಹಾಸಭಾ ಅಧ್ಯಕ್ಷ ರೇವಣಸಿದ್ದಪ್ಪ ಗೌಡೂರು, ಚಿದಾನಂದ, ಭೀಮಣ್ಣ, ಬಸವರಾಜ  ಗೌಡೂರು, ಯಲ್ಲಾಲಿಂಗ ಕುಣೆಕೆಲ್ಲೂರು, ಚಂದ್ರಶೇಖರ ಭವಾನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next