ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಪಿಡಿಒ ಬೇನಾಮಿ ಬಿಲ್ ಮಾಡಿ ಲಕ್ಷಾಂತರ ರೂ. ಹಣ ಲೂಟಿ ಮಾಡಿದ್ದಾರೆ ಎಂದು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಒ ಹರೀಶ್ ಗ್ರಾಪಂ ಸದಸ್ಯರಿಗೆತಿಳಿಯದೇ ಹಲವು ಏಜೆಂನ್ಸಿ, ಅಂಡಿಗಳ ಹೆಸರಿಗೆ ಚೆಕ್‌ಬರೆದು ನೀಡಿದ್ದು, ಅಲ್ಲಿಂದ 40 ಲಕ್ಷ ರೂ.ಗೂ ಹೆಚ್ಚುಹಣ ಲಪಟಾಯಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ತನಿಖೆ ಮಾಡಿ, ಪಿಡಿಒ ಅಮಾನತು ಮಾಡದೆಹೋದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೈಪ್‌ಲೈನ್ ಕಾಮಗಾರಿ ಮಾಡದೆ ಇರುವುದಕ್ಕೆ ಕಳೆದ ಏಪ್ರಿಲ್ ತಿಂಗಳಿನಲ್ಲಿ 6.40 ಲಕ್ಷ ರೂ. ಹಣದಚೆಕ್ ಅನ್ನು ಬರೆದು ಅಂಗಡಿಗಳಿಗೆ ನೀಡಿ, ಅವರಿಂದಹಣ ಪಡೆದಿದ್ದಾರೆ. ಕಂಪ್ಯೂಟರ್ ರಿಪೇರಿಗಾಗಿ 65 ಸಾವಿರ ರೂ. ಚೆಕ್ ನೀಡಿದ್ದಾರೆ. ಅವರು ನೀಡಿರುವಹೆಸರಿಂದ ಸಂಸ್ಥೆ ತಾಲೂಕಿನಲ್ಲಿ ಇಲ್ಲ. ಅದರ ವಿಳಾಸಹುಡುಕಿದರೂ ದೊರೆಯುತ್ತಿಲ್ಲ. ಈ ರೀತಿ ಬೇನಾಮಿಸಂಸ್ಥೆಯ ಹೆಸರಿನಲ್ಲಿ ಚೆಕ್ ಬರೆದು ಅವರ ಮೂಲಕಹಣ ವಸೂಲಿ ದಂಧೆಯಲ್ಲಿ 8 ವರ್ಷದಿಂದ ತೊಡಗಿದ್ದಾರೆ ಎಂದು ಆಪಾದನೆ ಮಾಡಿದರು.
ಕಾಫಿ, ಟೀಗೆ 5 ಸಾವಿರ ರೂ.: ಅಧಿಕಾರಿಗಳು ಕಚೇರಿ ಭೇಟಿ ನೀಡಿದರೆ ಅವರಿಗೆ ಕಾಫಿ ಟೀಗಾಗಿ 5 ಸಾವಿರ ರೂ., ಊಟಕ್ಕಾಗಿ 26 ಸಾವಿರ ರೂ. ಎಂದು ಬರೆದು ಅದನ್ನು ಚೆಕ್ ಮೂಲಕ ಹೋಟೆಲ್‌ಗೆ ನೀಡಿದ್ದಾರೆ.ಬಡವರ ಮನೆಯ ಮದುವೆ ತಗುಲುವ ವೆಚ್ಚದಷ್ಟುಊಟವನ್ನು ಅಧಿಕಾರಿಗಳು ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಅನುಮಾನ ಜನರಲ್ಲಿ ಉಂಟಾಗಲಿದೆ: ಈ ಲೆಕ್ಕ ಗಮನಿಸಿ, ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರನೀಡುವ ಸಂಬಳಕ್ಕೆ ಕಿಂಚಿತ್ತು ಕಾಳಜಿ ಇದ್ದರೆಅಧಿಕಾರಿಗಳ ಊಟದ ಹೆಸರಿನಲ್ಲಿ ಹಣ ಲೂಟಿಮಾಡಿರುವ ಪಿಡಿಒ ಬಗ್ಗೆ ತನಿಖೆ ಮಾಡಿ ತಪ್ಪುಸಾಬೀತಾದ್ರೆ ಅತನನ್ನು ಜೈಲಿಗೆ ಕಳುಹಿಸುವ ಕೆಲಸಮಾಡಬೇಕು. ಇಲ್ಲದೆ ಹೋದರೆ ಅವರೂ ಇದರಲ್ಲಿ ಪಾಲುದಾರರಾಗಿದ್ದಾರೆ ಎಂಬ ಅನುಮಾನ ಜನರಲ್ಲಿ ಉಂಟಾಗಲಿದೆ ಎಂದು ಹೇಳಿದರು.
ಅನುದಾನ ಕಡಿತ: ಗ್ರಾಮದಲ್ಲಿ ಮತ ಪಡೆದು ಸದಸ್ಯರಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು, ಅಧಿಕಾರಿ ಪ್ರಶ್ನೆ ಮಾಡಿದರೆ ಅವರಿಗೆ ಅನುದಾನ ಕಡಿತ ಮಾಡಲಾಗುತ್ತಿದೆ.ಯಾವ ಸದಸ್ಯ ಪಿಡಿಒಗಳು ಮಾಡುವ ಅಕ್ರಮಕ್ಕೆ ತಲೆ ತಗ್ಗಿಸುತ್ತಾನೆ. ಅವರಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ.ಸದಸ್ಯ ಪ್ರಶ್ನೆ ಮಾಡಿದರೆ ಶಾಸಕರ ಹೆಸರು ಹೇಳುವುದನ್ನು ನೋಡಿದರೆ, ಅವರು ಪಿಡಿಒಗಳ ಮೂಲಕ ಭ್ರಷ್ಟಾಚಾರ ಮಾಡಿಸುತ್ತಿದ್ದಾರೆ. ಈ ಬಗ್ಗೆ ಅವರೇ ಉತ್ತರ ನೀಡಿಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ನುಗ್ಗೇಹಳ್ಳಿ ಗ್ರಾಪಂ ಸದಸ್ಯರಾದ ಗೌಡಾಕಿ ಮಂಜು, ಕಿರಣ್ ಕುಮಾರ್, ರಾಧಾ, ಸವಿತಾ, ರಮ್ಯಾ, ರೇಷ್ಮಾಭಾನು ಉಪಸ್ಥಿತರಿದ್ದರು.