Advertisement

Karwar ಗೋವಾ ಮದ್ಯ ಅಕ್ರಮ ಸಾಗಾಟ; ಮೂವರ ಬಂಧನ

10:30 PM Sep 05, 2023 | Team Udayavani |

ಕಾರವಾರ: ನಗರದ ಕಾಳಿ ಸೇತುವೆ ಸಮೀಪ ಕಾಪ್ರಿ ದೇವಸ್ಥಾನದ ಸನಿಹ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಮೂವರನ್ನು ಮಾಲು ಸಮೇತ ನಗರಠಾಣೆಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

Advertisement

ಅಕ್ರಮ ಮದ್ಯ ಸಾಗಾಟದ ಆರೋಪದಲ್ಲಿ ಮಿಥುನ್ ನಾಯ್ಕ, ಸಂತೋಷ ಠಾಕರಕರ್, ಪ್ರಸಾದ್ ದೇಸಾಯಿ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 1,18,800 ರೂ.ಬೆಲೆಯ ಪೆನ್ನಿ ಹಾಗೂ ವಿಸ್ಕಿ ವಶಪಡಿಸಿಕೊಳ್ಳಲಾಗಿದೆ. 504 ಬಾಟಲ್ ಪೆನ್ನಿ ಹಾಗೂ 220 ಕ್ಕೂ ಹೆಚ್ಚು ಮದ್ಯ ತುಂಬಿದ ವಿಸ್ಕಿ ಬಾಟಲ್ ವಶಕ್ಕೆ ಪಡೆಯಲಾಗಿದೆ. 2 ಲಕ್ಷ ಬೆಲೆಯ ಗೂಡ್ಸ್ ವಾಹನ ಸಹ  ವಶವಾಗಿದೆ. ನಗರ ಠಾ‌ಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next