Advertisement

ಅಕ್ರಮ ಗ್ಯಾಸ್‌ ರೀಫಿಲ್ಲಿಂಗ್‌: ಆರೋಪಿ ಬಂಧನ,141 ಸಿಲಿಂಡರ್‌,2 ಕ್ಯಾಂಟರ್‌ ಜಪ್ತಿ 

12:38 PM Feb 14, 2024 | Team Udayavani |

ಬೆಂಗಳೂರು: ಅಕ್ರಮವಾಗಿ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುತ್ತಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ಸೋಲದೇವನಹಳ್ಳಿಯ ಗುನಿ ಅಗ್ರಹಾರ ನಿವಾಸಿ ರಾಘವೇಂದ್ರ(34) ಬಂಧಿತ. ಆರೋಪಿಯಿಂದ 19 ಕೆ.ಜಿ. ತೂಕದ 31 ದೊಡ್ಡ ಸಿಲಿಂಡರ್‌ಗಳು ಹಾಗೂ 14.2 ಕೆ.ಜಿ. ತೂಕದ 110 ಗ್ಯಾಸ್‌ ಸಿಲಿಂಡರ್‌ಗಳು, ರೀಫಿಲ್ಲಿಂಗ್‌ ರಾಡ್‌ಗಳು ಮತ್ತು 2 ಗೂಡ್ಸ್‌ ಕ್ಯಾಂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೋಲದೇವನಹಳ್ಳಿಯ ಗುನಿ ಅಗ್ರಹಾರದಲ್ಲಿ ಗೃಹ ಬಳಕೆ ಸಿಲಿಂಡರ್‌ ಏಜೆನ್ಸಿ ಹಾಗೂ ಉಗ್ರಾಣದಲ್ಲಿ ಅಕ್ರಮವಾಗಿ ರೀಫಿಲ್ಲಿಂಗ್‌ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಫೆ.9ರಂದು ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿ ರಾಘವೇಂದ್ರ, ರಾಡ್‌ಗಳ ಮೂಲಕ ಅಧಿಕೃತ ಕಂಪನಿಯ ಸಿಲಿಂಡರ್‌ಗಳಿಂದ ಬೇರೆ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುತ್ತಿರುವುದು ಹಾಗೂ ಅಧಿಕೃತ ಕಂಪನಿಗಳ ಲೇಬಲ್‌ ಅಂಟಿಸಿ, ಕಂಪನಿಯ ಸಿಲಿಂಡರ್‌ಗಳೆಂದು ಸಾರ್ವಜನಿಕರಿಗೆ ನಂಬಿಸಿ, ಸರಬರಾಜು ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಆರೋಪಿ ಗ್ಯಾಸ್‌ ಏಜೆನ್ಸಿ ನಡೆಸಲು ಪರವಾನಗಿ ಇದ್ದರೂ ಅದನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ರೀಫಿಲ್ಲಿಂಗ್‌ ಮಾಡುತ್ತಿರು ವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next