Advertisement

ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ : ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಸ್ಫೋಟಕಗಳು ವಶಕ್ಕೆ

09:00 PM Aug 02, 2021 | Team Udayavani |

ಪಾಂಡವಪುರ : ಐತಿಹಾಸಿಕ  ಪ್ರಸಿದ್ದ ಬೇಬಿ ಬೆಟ್ಟದ ಅಮೃತ್‌ಮಹಲ್‌ ಕಾವಲ್‌ ಸರ್ವೆನಂ 1ರ ನಿಷೇಧಿತ ಕಲ್ಲು ಗಣಿಗಾರಿಕೆ ಪ್ರದೇಶದ ಸಿದ್ದಲಿಂಗೇಶ್ವರ ಕ್ರಷರ್‌ ಬಳಿ ಪತ್ತೆಯಾದ ಸ್ಪೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಬೇಬಿ ಬೆಟ್ಟದ ಸರ್ವೇ ನಂ.1ರಲ್ಲಿ ಸಾಕಷ್ಟು ಗಿಡಗಂಟಿಗಳು ಬೆಳೆದು ಪೊದೆಯಂತಿದ್ದ ಸ್ಥಳದಲ್ಲಿ ಅಕ್ರಮವಾಗಿ ಚೀಲಗಳಲ್ಲಿದ್ದ ಸ್ಪೋಟಕಗಳು ಸ್ಥಳೀಯ ಕುರಿಗಾಹಿಗಳ ಕಣ್ಣಿಗೆ ಬಿದ್ದಿದ್ದು, ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಿಮಿಸಿದ ಪೊಲೀಸರು 20 ಜಿಲೇಟಿನ್‌ ಕಡ್ಡಿಗಳು, ಮೆಗ್ಗರ್‌ಬ್ಲಾಸ್ಟಿಂಗೆ ಬಳಸಲಾಗುವ 11 ಡಿಟೊನೇಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ  ಪತ್ತೆಯಾದ ಸ್ಪೋಟಕಗಳಲ್ಲಿ  ಬಹುತೇಕ ಜಿಲೇಟಿನ್‌ ಕಡ್ಡಿಗಳು ಹಾಗೂ ಡಿಟೋನೇಟರ್‌ಗಳು ಸಜೀವ ಆಗಿದ್ದವು ಎಂದು ತಿಳಿದು ಬಂದಿದೆ. ಕಳೆದ 15 ದಿನಗಳ  ಹಿಂದೆ ಆಶೀರ್ವಾದ ಕ್ರಷರ್‌ ಬಳಿ  ಇದೇ ರೀತಿ ಸಾಕಷ್ಟು ನ್ಪೋಟಕಗಳು ಪತ್ತೆಯಾಗಿರುವುದ್ದವು.

ಬೇಬಿ ಬೆಟ್ಟದ ಸರ್ವೇ ನಂ.1ರ ನಿಷೇಧಿತ  ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟಕಗಳು ಹಾಗಾಗೆ ಪತ್ತೆಯಾಗುತ್ತಿರುವ  ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ಇನ್ನೂ ಜೀವಂತವಾಗಿದೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿವೆ. ಕನ್ನಂಬಾಡಿ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಈ ಭಾಗದಲ್ಲಿ ಎಲ್ಲಾ ರೀತಿಯ ಗಣಿಗಾರಿಕೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದರೂ, ಅಕ್ರಮ ಕಲ್ಲು ಗಣಿಗಾರಿಕೆ  ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸ್ಪೋಟಕಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆ.ಪ್ರಭಾಕರ್‌, ಪೇದೆಗಳಾದ ಅಭಿಷೇಕ್‌, ಆನಂದ ಹಾಗೂ ಇತರ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ನ್ಪೋಟಕಗಳನ್ನು ವಶಕ್ಕೆ ಪಡೆದಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next