Advertisement

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

05:59 PM Apr 20, 2024 | Team Udayavani |

ರಾಮನಗರ: ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಜಾಗೃತಗೊಂಡಿರುವ ಜಿಲ್ಲಾಡಳಿತ ಚುನಾವಣಾ ಅಕ್ರಮಗಳ ಮೇಲೆ ಕಣ್ಣಿರಿಸಿದೆ.

Advertisement

ಚುನಾವಣಾ ಇತಿಹಾಸದಲ್ಲಿ ಎಂದೂ ಕಂಡರಿಯದ ಅಕ್ರಮ ಹಣ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದುವರೆಗೆ ಸುಮಾರು 25 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಜಿಲ್ಲೆಯಲ್ಲಿ ಇದೇ ಮೊದಲ ಬಾರಿ.

ಹೌದು.., ಈಬಾರಿ ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕೋಟಿ ಹಣ, ಹತ್ತಾರು ಕೆ.ಜಿ. ಚಿನ್ನ, ಬೆಳ್ಳಿ, 50 ಸಾವಿರ ಲೀ.ನಷ್ಟು ಮದ್ಯವನ್ನು ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ದಾಖಲಿನಲ್ಲಿ ದಾಖಲೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳ ವಿರುದ್ಧ ಚುನಾವಣಾ ಕರ್ತವ್ಯದಲ್ಲಿ ನಿರತವಾಗಿರುವ ಎಸ್‌ಎಸ್‌ಟಿ ತಂಡ ಮತ್ತು ಪೊಲೀಸ್‌ ಇಲಾಖೆ ಹದ್ದಿನಕಣ್ಣಿರಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಕ್ರಮಗಳ ಪ್ರಕರಣಗಳ ಸುರಿಮಳೆಯೇ ಆಗಿದ್ದು, ಹಿಂದೆಂದೂ ಕಾಣದಷ್ಟು ಪ್ರಕರಣಗಳು ಈಬಾರಿಯ ಚುನಾವಣೆಯಲ್ಲಿ ದಾಖಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದುವರೆಗೆ 667 ವಿವಿಧ ಪ್ರಕರಣಗಳು ದಾಖಲಾಗಿದೆ. ಹಿಂದಿನ ಯಾವ ಚುನಾವಣೆಗಳಲ್ಲೂ ಇಷ್ಟು ಪ್ರಕರಣಗಳು ದಾಖಲಾಗಿರಲಿಲ್ಲ. ಮತದಾನಕ್ಕೆ ಇನ್ನೂ 7 ದಿನಗಳ ಕಾಲಾವಕಾಶವಿದ್ದು, ಪ್ರಕರಣಗಳ ಸಂಖ್ಯೆ ಸಾವಿರ ದಾಟಲಿದೆ ಎಂದು ಅಂದಾಜಿಸಲಾಗಿದೆ.

5.44 ಕೋಟಿ ರೂ. ಹಣ ವಶ: ಚೆಕ್‌ಪೋಸ್ಟ್‌ನಲ್ಲಿ ಎಸ್‌ಎಸ್‌ಟಿ ತಂಡ ಹಾಗೂ ಫ್ಲೆàಯಿಂಗ್‌ಸ್ಕ್ವಾಡ್‌ ತಂಡದಿಂದ ಅಕ್ರಮವಾಗಿ ಸಾಗಾಣಿಕೆ ಮಾಡುವ ಹಣಗಳ ಮೇಲೆ ಕಣ್ಣಿರಿಸಲಾಗಿದೆ. ಬಿಡದಿಯ ಚೆಕ್‌ ಪೋಸ್ಟ್‌ ಬಳಿ 5.37 ಕೋಟಿ ರೂ. ಹಣವನ್ನು ಎಟಿಎಂವಾಹನದಲ್ಲಿ ದಾಖಲೆ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದರೊಂದಿಗೆ ಎಸ್‌ಎಸ್‌ಟಿ ತಂಡ ಮತ್ತು ಫ್ಲೇಯಿಂಗ್‌ ಸ್ಕ್ವಾಡ್‌ ತಂಡಗಳು ದಾಳಿನಡೆಸಿ ಹಲವಾರು ಕಡೆ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದವು. ಇದುವರೆಗೆ ಒಟ್ಟಾರೆ5.50 ಕೋಟಿ ರೂ. ನಷ್ಟು ಹಣವನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ 5.38 ಕೋಟಿ ರೂ. ಹಣವನ್ನು ದಾಖಲೆ ಪರಿಶೀಲಿಸಿ ಹಿಂದಿರುಗಿಸಲಾಗಿದೆ. ಸಮರ್ಪಕ ದಾಖಲೆ ತೋರಿಸದ ಹಿನ್ನೆಲೆಯಲ್ಲಿ 12 ಲಕ್ಷ ರೂ. ಹಣವನ್ನು ಜಿಲ್ಲಾಡಳಿತ ಜಿಲ್ಲಾ ಖಜಾನೆಯಲ್ಲಿ ಇರಿಸಿ ಪ್ರಕರಣ ದಾಖಲಿಸಿದೆ.

Advertisement

54 ಸಾವಿರ ಲೀ. ಮದ್ಯ ವಶ: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಕ್ರಮ ಮದ್ಯದ ವಿರುದ್ಧ ಅಬ್ಕಾರಿ, ಪೊಲೀಸ್‌ ಇಲಾಖೆ ವಿಶೇಷ ನಿಗಾವಹಿಸಿದ್ದು, ಎಸ್‌ಎಸ್‌ಟಿ ಮತ್ತು ಫ್ಲೆàಯಿಂಗ್‌ ಸ್ಕ್ವಾಡ್‌ ತಂಡಗಳು ಅಕ್ರಮ ಮದ್ಯದ ವಿರುದ್ಧ ಕ್ರಮಜರುಗಿಸಲು ಮುಂದಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 54235 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಒಟ್ಟಾರೆ ಮೌಲ್ಯ 1,70,09,189 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇನ್ನು 1.67 ಲಕ್ಷ ರೂ. ಮೌಲ್ಯದ 1.675 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಅಪಾರ ಪ್ರಮಾಣದ ಉಡುಗೊರೆ ವಶಕ್ಕೆ : ಪಕ್ಷಗಳು ಮತದಾರರಿಗೆ ಹಂಚಿಕೆ ಮಾಡಲು ದಾಸ್ತಾ ನು ಮಾಡಿದ್ದ ವಸ್ತುಗಳ ವಿರುದ್ಧವೂ ಪೊಲೀಸ್‌ ಇಲಾಖೆ ಕಣ್ಣಿರಿಸಿದೆ. 7.64 ಲಕ್ಷ ಮೌಲ್ಯದ 50 ಬಂಡಲ್‌ ಉಡುಗೆ ವಸ್ತ್ರಗಳು, 6.81 ಲಕ್ಷ ಮೌಲ್ಯದ 135 ಡಿನರ್‌ ಸೆಟ್‌ಗಳು, 67 ಸಾವಿರ ಮೌಲ್ಯದ 270 ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.

19 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ : ಯಾವುದೇ ದಾಖಲೆ ಇಲ್ಲದೆ ಸಾಗಾಣಿಕೆ ಮಾಡು ತ್ತಿದ್ದ 19 ಕೋಟಿ ಮೌಲ್ಯದ 28.5 ಕೆ.ಜಿ. ಚಿನ್ನ, 21ಲಕ್ಷ ಮೌಲ್ಯದ 28 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ43ದ್ವಿಚಕ್ರ ವಾಹನ, 1 ತ್ರಿಚಕ್ರ ವಾಹನ, 1 ನಾಲ್ಕು ಚಕ್ರದ ವಾಹನ, 4 ಬೃಹತ್‌ ವಾಹನ ಜಪ್ತಿ ಮಾಡಲಾಗಿದೆ.

12 ಲೀಟರ್‌ ಅಕ್ರಮ ಮದ್ಯ ವಶ : ರಾಮನಗರ: ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು, ಏ. 19ರ ಬೆಳಗ್ಗೆ 9 ಗಂಟೆಯ ವರೆಗೆ ಒಟ್ಟು 12.33ಲೀ. ಮದ್ಯ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ 4,608 ರೂ. ಮೌಲ್ಯದ 12.33 ಲೀ ಮದ್ಯ ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆಯನ್ನು ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಅಕ್ರಮ ಹಣ, ಮಧ್ಯ, ಬೆಲೆಬಾಳುವ ವಸ್ತುಗಳು ಪತ್ತೆಯಾದಲ್ಲಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ. ಎಫ್‌ಎಸ್‌, ಎಸ್‌ ಎಸ್‌ಟಿ ತಂಡಗಳೊಂದಿಗೆ ಪೊಲೀಸ್‌, ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನೀತಿಸಂಹಿತೆ ಜಾರಿಗೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌, ಜಿಲ್ಲಾ ಚುನಾವಣಾಧಿಕಾರಿ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next