Advertisement

ನಿವೇಶನ ನಿರ್ಮಾಣದಲ್ಲಿ ಅಕ್ರಮ; ಆರೋಪ

03:17 PM Nov 24, 2021 | Team Udayavani |

ರಾಯಚೂರು: ಗಂಗಾಪರಮೇಶ್ವರಿ ಗೃಹ ನಿರ್ಮಾಣ ಸಹಕಾರಿ ಸಂಘವು ನಿವೇಶನ ನಿರ್ಮಾಣದಲ್ಲಿ ಅನುಮೋದನೆಗಿಂತ ಹೆಚ್ಚುವರಿ ನಿವೇಶನಗಳನ್ನು ನಿರ್ಮಿಸಿ 18 ಕೋಟಿ ರೂ. ಅಕ್ರಮ ಎಸಗಿದ್ದಾರೆ ಎಂದು ಕಡಗೋಳ ಶರಣಪ್ಪ ಆರೋಪಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೇಶನ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಕೇವಲ 10 ಎಕರೆಗೆ ಮಾತ್ರ. ಆದರೆ, ಈ ಸಂಘ ನಿಯಮಬಾಹಿರವಾಗಿ ಹೆಚ್ಚುವರಿಯಾಗಿ 31 ಎಕರೆಯಲ್ಲಿ ನಿವೇಶನದ ಖಾತೆ ತೆಗೆಯಲಾಗಿದೆ. ಅಂದಾಜು 18 ಕೋಟಿ ರೂ. ಗೂ ಅಧಿ ಕ ಅಕ್ರಮ ಎಸಲಾಗಿದೆ ಎಂದರು.

ನಗರಸಭೆ ಗಂಗಾ ಪರಮೇಶ್ವರಿ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ವಸತಿ ವಿನ್ಯಾಸಕ್ಕೆ ಅನುಮೋದನೆ ನೀಡಲಾಗಿತ್ತು. ವಸತಿ ವಿನ್ಯಾಸದಲ್ಲಿ ಸರ್ವೇ ನಂ.1236/2 ವಿಸ್ತೀರ್ಣ 2 ಎಕರೆ, ಸರ್ವೇ ನಂ. 1238, 1236 ವಿಸ್ತೀರ್ಣ 8 ಎಕರೆ ಒಟ್ಟು ವಿಸ್ತೀರ್ಣ 10 ಎಕರೆ ವಸತಿ ವಿನ್ಯಾಸ ರಚನೆ ಮಾಡಿ ನಗರಾಭಿವೃದ್ಧಿ ಪ್ರಾಧಿ ಕಾರಕ್ಕೆ 16,184 ಚ.ಮೀ ಪ್ರದೇಶ ಕಾಯ್ದಿರಿಸಲಾಗಿತ್ತು. ಈ ಪ್ರದೇಶದಲ್ಲಿ ಸುಮಾರು 82 ನಿವೇಶನಗಳಿಗೆ ಅನುಮೋದನೆ ನೀಡಲಾಗಿದೆ ಎಂದು ದೂರಿದರು.

ಸರ್ವೇ ನಂ.1238, 1236 ವಿಸ್ತೀರ್ಣ 8 ಎಕರೆಗೆ 103 ನಿವೇಶನ ಹೆಚ್ಚುವರಿಯಾಗಿ ನೀಡಿದ್ದು, ಈ ಕುರಿತು ಜಿಲ್ಲಾಧಿ ಕಾರಿಗೆ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ನಗರಸಭೆಗೆ ಪತ್ರ ಬರೆದಿದ್ದು, ನಗರಸಭೆ ಪ್ರತ್ಯುತ್ತರ ನೀಡಿಲ್ಲ. ಜಿಲ್ಲಾಧಿಕಾರಿಗಳು ವಸತಿ ವಿನ್ಯಾಸ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ತಪಸ್ಥಿತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next