Advertisement
ಕಂಟೈನರ್ ಚಾಲಕ ವೇಣೂರು ನಿವಾಸಿ ಹೈದರ್, ಕಂಟೈನರ್‌ನಲ್ಲಿದ್ದ ಕಾಸರಗೋಡಿನ ಆಲಂಬಾಡಿ ನಿವಾಸಿ ಅಬ್ದುಲ್ ರಹಿಮಾನ್, ಪಡ್ರೆ ನಿವಾಸಿ ಬಾಬು ಹಾಗೂ ಹಾಸನ ಮೂಲದ ಮಂಜೇಗೌಡ, ಕಾರಿನಲ್ಲಿದ್ದ ಕಾಸರಗೋಡು ಆಲಂಬಾಡಿ ನಿವಾಸಿ ಗಳಾದ ಅಬ್ದುಲ್ ರಹಿಮಾನ್, ಮಹಮ್ಮದ್ ಮುಸ್ತಫಾ, ಚಾಲಕ ಮಹಮ್ಮದ್ ಅಕºರ್ ಬಂಧಿತರು.
ಕೊಲ್ಲಾಪುರದಲ್ಲಿ ಅತ್ಯಂತ ಕನಿಷ್ಠ ಬೆಲೆಗೆ ಜಾನುವಾರುಗಳು ಲಭ್ಯವಾಗುತ್ತಿದ್ದು, ಮಾಂಸದ ಉದ್ದೇಶದಿಂದ ಅದನ್ನು ಖರೀದಿಸಿ ಕಾಸರಗೋಡಿಗೆ ಸಾಗಿಸಿ ಅಲ್ಲಿ ದುಪ್ಪಟ್ಟು ಬೆಲೆಗೆ ಮಾರಲಾಗುತ್ತದೆ. ಆರೋಪಿಗಳು ಕೆಲವು ದಿನಗಳ ಹಿಂದೆ ಎರಡು ಟ್ರಿಪ್ ಜಾನುವಾರುಗಳನ್ನು ಯಶಸ್ವಿಯಾಗಿ ಸಾಗಾಟ ನಡೆಸಿದ್ದು, ಮೂರನೇ ಟ್ರಿಪ್ ಸಾಗಿಸುವ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ದ.ಕ.ಜಿಲ್ಲಾ ಎಸ್ ಪಿ ಅವರ ನಿರ್ದೇಶನದಂತೆ ಬಂಟ್ವಾಳ ಉಪವಿಭಾಗ ಎಎಸ್ಪಿ ಸೈದುಲ್ ಅದಾವತ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಬೆಳ್ತಂಗಡಿ ಸಿಐ ಸಂದೇಶ್ ಪಿ.ಜಿ., ಧರ್ಮಸ್ಥಳ ಪಿಎಸ್‌ಐ ಅವಿನಾಶ್, ಬೆಳ್ತಂಗಡಿ ಪಿಎಸ್‌ಐ ರವಿ ಬಿ.ಎಸ್. ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.
Advertisement
ದಾರಿ ಬದಲಿಸಿದರೂ ಸಿಕ್ಕಿ ಬಿದ್ದರು!ಎರಡು ದಿನಗಳ ಹಿಂದೆ ಸಾಸ್ತಾನದ ಟೋಲ್‌ಗೇಟ್ ಬಳಿ ಜಾನುವಾರು ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಕೋಟ ಪೊಲೀಸರು ಪತ್ತೆ ಹಚ್ಚಿದ್ದರು. ಇದನ್ನು ಅರಿತು ಆರೋಪಿಗಳು ದಾರಿ ಬದಲಿಸಿ, ಚಿಕ್ಕಮಗಳೂರಿನಿಂದ ಬೆಳ್ತಂಗಡಿ ಮೂಲಕ ಕಾಸರಗೋಡಿಗೆ ಸಾಗುತ್ತಿದ್ದರು ಎಂದು ಬೆಳ್ತಂಗಡಿ ಸಿಐ ಸಂದೇಶ್ ತಿಳಿಸಿದ್ದಾರೆ.