ಚಿಕ್ಕನಾಯಕನಹಳ್ಳಿ: ಕೆಲ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಿಂದ ಅಕ್ರಮ ನಡೆಯುತ್ತಿದ್ದು, 3 ವರ್ಷ ಪೂರೈಸಿರುವ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ಹೊಸ ನೌಕರರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಶಾಸಕ ಜೆ.ಸಿ. ಮಾಧುಸ್ವಾಮಿ ಸೂಚಿಸಿದರು.
ತಾಲೂಕು ಪಂಚಾಯತಿ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ 26 ಇಲಾಖೆಗಳ ಪ್ರಗತಿ ವರದಿ ಪರಿಶೀಲಿಸಿ ಮಾತನಾಡಿದರು.
ಅಬಕಾರಿ ಇಲಾಖೆ ನಿರ್ಲಕ್ಷ್ಯದಿಂದ ಪೆಟ್ಟಿಗೆ ಅಂಗಡಿಗಳಲ್ಲಿಯೂ ಮದ್ಯ ಮಾರಟವಾಗುತ್ತಿದೆ. ವಾಹನಗಳಲ್ಲಿ ಅನಧಿಕೃತವಾಗಿ ಮದ್ಯ ಸಾಗಣೆ ನಿಲ್ಲಿಸಬೇಕು ಎಂದು ಹೇಳಿದರು.ಅಂಬೇಡ್ಕರ್ ಭವನಗಳ ನಿರ್ವಹಣೆ ಸರಿಯಿಲ್ಲದೆ ಪಾಳುಬಿದ್ದ ಮನೆಗಳಂತಾ ಗಿವೆ. ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರ್‌ನಲ್ಲಿನ ಅಂಬೇಡ್ಕರ್ ಭವನ ಸ್ವಚ್ಛಗೊಳಿಸಲು ಇಒ ನಾರಾಯಣ ಸ್ವಾಮಿಗೆ ಶಾಸಕರು ಸೂಚಿಸಿದರು.
ಜಾನುವಾರುಗಳ ತಪಾಸಣೆ ನಿಯ ಮಿತವಾಗಿ ಮಾಡಬೇಕು ಎಂದು ಪಶು ಇಲಾಖೆ ವೈದ್ಯಾಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು. ಭಾಗ್ಯಲಕ್ಷ್ಮೀ ಬಾಂಡ್‌ಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಅಂಗನವಾಡಿಗಳಲ್ಲಿ ಆಹಾರ ಪದ್ಧತಿ ಬದಲಾಯಿಸಿಕೊಳ್ಳುವಂತೆ ಸಿಡಿಪಿಒ ತಿಪ್ಪಯ್ಯಗೆ ತಿಳಿಸಿದರು.
ಹುಳಿಯಾರಿನ ಬಸ್ ನಿಲ್ದಾಣದ ಒಳಭಾಗದಲ್ಲಿರುವ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಜಿಪಂ ಸದಸ್ಯ ವೈ.ಸಿ ಸಿದ್ದರಾಮಯ್ಯ ತಿಳಿಸಿ ದರು. ಇದಕ್ಕೆ ಉತ್ತರಿಸಿದ ಶಾಸಕರು ಬಸ್ ನಿಲ್ದಾಣದಲ್ಲಿನ ಅಂಗಡಿಗಳನ್ನು ಎರಡು ದಿನಗಳ ಒಳಗೆ ಖಾಲಿ ಮಾಡಿಸುವಂತೆ ಹುಳಿಯಾರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಚೇತನ ಗಂಗಾಧರ್, ತಹಶೀಲ್ದಾರ್ ತೇಜಸ್ವಿನಿ, ಜಿಪಂ ಸದಸ್ಯ ರಾದ ವೈ.ಸಿ.ಸಿದ್ದ ರಾಮಯ್ಯ, ಕಲ್ಲೇಶ್, ಮಹಾಲಿಂಗಯ್ಯ, ಹೊನ್ನೇಬಾಗಿ ಶಶಿಧರ್, ರಾಜ್‌ಕುಮಾರ್ ಮತ್ತಿತರರು ಹಾಜರಿದ್ದರು.