ಬಂಗಾರಪೇಟೆ: ಭೂ ರಹಿತ ಬಡವರಿಗೆ ಭೂಮಿ ಮಂಜೂರು ಮಾಡಲು ಅರ್ಜಿ ಸಲ್ಲಿಸಿರುವ ರೈತರ ಜಮೀನನ್ನು ಪರಿಶೀಲಿಸಿದನಂತರ ಸಮಿತಿಯಲ್ಲಿಬಡವರಿಗೆ ನೀಡಬೇಕಾದ ಸಾಗುವಳಿ ಚೀಟಿಗಳು ಲಕ್ಷಲಕ್ಷಕ್ಕೆ ಸಾರ್ವಜನಿಕವಾಗಿ ಮಾರಾಟವಾಗುತ್ತಿವೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
ರೈತ ಸಂಘದಿಂದ ಧರಣಿ ಮಾಡಿ ತಹಶೀಲ್ದಾರ್ ಎಂ.ದಯಾನಂದ್ ಕಂದಾಯ ಸಚಿವರಿಗೆ ಮನವಿನೀಡಿ ಮಾತನಾಡಿದ, ತಹಶೀಲ್ದಾರ್ ಜಯಣ್ಣ,ಸತ್ಯಪ್ರಕಾಶ್ ಅವಧಿಯಲ್ಲಿ ತಾಲೂಕಿನಾ ದ್ಯಂತಆಗಿರುವ ಭೂ ಹಗರಣ ಮತ್ತು ಸಾಗುವಳಿ ಚೀಟಿದಂಧೆಯನ್ನು ಸಿಬಿಐಗೆ ಒಪ್ಪಿಸಿ ಪ್ರತಿ ಹಳ್ಳಿಯಜಾನುವಾರುಗಳಿಗೆ 25 ಎಕರೆ ಗೋಮಾಳ ಮೀಸಲಿಡಬೇಕೆಂದು ಆಗ್ರಹಿಸಿದರು.
ಹೆಸರಿಗೆ ಮಾತ್ರ ಬಡವರು ಮಂಜೂರು ಮಾತ್ರ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಹಾಗೂ ಜನಪ್ರತಿನಿಧಿಗಳ ಪಾಲಾಗಿದೆ. ಜಿಲ್ಲಾದ್ಯಂತ ತಹಶೀಲ್ದಾರ್ ಜಯಣ್ಣ ಕೆಲಸ ನಿರ್ವಹಿಸಿರುವ ಸ್ಥಳಗಳಲ್ಲಿ ನಡೆದಿರುವ ಭೂ ಹಗರಣ ಹಾಗೂ ಅಕ್ರಮ ಸಾಗುವಳಿ ಚೀಟಿ ದಂಧೆ ಇಡೀ ಕಂದಾಯ ಹಾಗೂ ಜಿಲ್ಲಾಡಳಿತವನ್ನೇ ಬೆಚ್ಚಿ ಬೀಳಿಸುತ್ತದೆ ಎಂದರು.
ತಾಲೂಕು ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ, ತಾಲೂಕಿನಲ್ಲಿ ಕೆಲಸ ನಿರ್ವಹಿಸಿದಂತಹ ದಿವಂಗತ ಸತ್ಯಪ್ರಕಾಶ್ ಅವಧಿಯಲ್ಲಿ ಸಾವಿರಾರು ಎಕೆರೆ ಅಕ್ರಮ ಮಂಜೂರು ಮಾಡುವ ಜೊತೆಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ನಂತರ ಕೆಲಸ ನಿರ್ವಹಿಸುತ್ತಿದ್ದ ಜಯಣ್ಣನವರು ಕಾಮ ಸಮುದ್ರ, ಬೂದಿಕೋಟೆ, ಕಸಬಾ ಹೋಬಳಿಗಳಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಜನ ಪ್ರತಿನಿಧಿಗಳಿಗೆ ಹಾಗೂ ಅವರ ಬೆಂಬಲಿಗರಿಗೆ ಮತ್ತು ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಮಂಜೂರು ಮಾಡಿರುವ ಆರೋಪಗಳು ಹೆಚ್ಚಾಗಿರುವುದರಿಂದ ವಿಶೇಷ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ತಹಶೀಲ್ದಾರ್ ಜಯಣ್ಣ ಹಾಗೂ ಸತ್ಯಪ್ರಕಾಶ್‌ಅವಧಿಯಲ್ಲಿ ಆಗಿರುವ ಭೂ ಹಗರಣ ಮತ್ತು ಅಕ್ರಮ ಸಾಗುವಳಿ ಚೀಟಿ ದಂಧೆಯನ್ನು ಸಿಬಿಐಗೆ ಒಪ್ಪಿಸಿ ಅದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಪ್ರತಿ ಹಳ್ಳಿ ಜಾನು ವಾರುಗಳು ಮೇಯಿಸಲು 25 ಎಕರೆ ಗೋಮಾಳಜಮೀನು ಮೀಸಲಿಡಬೇಕು.ಜೊತೆಗೆ ಭೂ ಹಗರಣವನ್ನು ಒಂದು ತಿಂಗಳ ಒಳಗೆ ಸಿಬಿಐಗೆ ಒಪ್ಪಿಸದೆ ಹೋದರೆ ಬಂಗಾರಪೇಟೆ ತಾಲೂಕು ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಂಡಹಳ್ಳಿ ಮುನ್ನಾ, ಹಸಿರು ಸೇನೆ ತಾಲೂಕು ಅಧ್ಯಕ್ಷ ಚಾಂದ್ ಪಾಷ, ಯುವ ಮುಖಂಡ ಕಿರಣ್, ಸ್ವಸ್ತಿಕ್ ಶಿವು, ಜಮೀರ್‌ಪಾಷ, ನವಾಜ್, ಜಾವಿದ್, ಗೌಸ್‌ಪಾಷ, ಮಹಮದ್ ಷೋಯಿಬ್ ಇತರರಿದ್ದರು.
ಹಿಂದಿನ ತಹಶೀಲ್ದಾರ್ ಅವಧಿಯಲ್ಲಿ ನಡೆದಿರುವ ಭೂ ಹಗರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಮ್ಮ ಮನವಿಯನ್ನು ದೂರು ಎಂದು ಪರಿಗಣಿಸಿ ಪರಿಶೀಲನೆನಡೆಸುವ ಜೊತೆಗೆ ಸರ್ಕಾರಕ್ಕೆ ನಿಮ್ಮ ಮನವಿಯನ್ನುಕಳುಹಿಕೊಡಲಾಗುವುದು.
–ಎಂ.ದಯಾನಂದ್, ತಹಶೀಲ್ದಾರ್